ವಾಡಿ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಎಸಯುಸಿಐ ಒತ್ತಾಯ

0
53

ಶಹಾಬಾದ:ನಗರದ ವಾಡಿ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಾಜ್ಯ ಹೆದ್ದಾರಿಯನ್ನು ಕೆಟ್ಟು ಹೋಗಿದ್ದು, ಹೊಸದಾಗಿ ರಸ್ತೆ ನಿರ್ಮಿಸ ಬೇಕೆಂದು ಆಗ್ರಹಿಸಿ ನಗರದ ಎಸಯುಸಿಐ(ಸಿ) ಪಕ್ಷದ ನಿಯೋಗ ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಿಯೋಗದ ಸದಸ್ಯರು ಬಸವೇಶ್ವರ ವೃತ್ತದಿಂದ ಜೇವರ್ಗಿ ವೃತ್ತದವರೆಗಿನ ರಸ್ತೆ ಸಂಪರ್ಣ ಹಾಳಾಗಿದೆ. ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಇಷ್ಟೆಲ್ಲಾ ರಸ್ತೆ ಹಾಳಾಗಲು ಗುತ್ತಿಗೆದಾರನ ಕಳಪೆ ಮಟ್ಟದ ಕಾಮಗಾರಿ. ಈ ಬಗ್ಗೆ ಹೋರಾಟ ನಡೆಸಿ, ರಸ್ತೆ ನಿರ್ಮಾಣಕ್ಕೆ ಒತ್ತಾಯಿಸಿದ್ದೆವೆ.ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಈಗಾಗಲೇ ಗುತ್ತಿಗೆದಾರನ ಬಿಲ್ ತಡೆ ಹಿಡಿಯಲಾಗಿದೆ. ಹೊಸದಾಗಿ ರಾಜ್ಯ ಹೆದ್ದಾರಿ ಕಾಮಗಾರಿ ಕೈಗೊಳ್ಳಲು ಯೋಜನೆ ರೂಪಿಸಿದ್ದು, ಆದ್ಷಟು ಬೇಗನೆ ಕೆಲಸ ಪ್ರಾರಂಭ ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದೆಂದು ಶಾಸಕ ಬಸವರಾಜ ಮತ್ತಿಮಡು ತಿಳಿಸಿದರು.

Contact Your\'s Advertisement; 9902492681

ರಾಮಘಡ ಆಶ್ರಯ ಕಾಲೋನಿಯ ಜನಗಳಿಗೆ ಹಕ್ಕು ಪತ್ರ ವಿತರಿಸಬೇಕೆಂದು ಮನವಿ ಮಾಡಿಕೊಂಡಾಗ, ಶಾಸಕರು ಈ ಬಗ್ಗೆ ನಗರಸಭೆಯ ಪೌರಾಯುಕ್ತರಿಗೆ ವಿಚಾರಿಸಿದರು. ಈಗಾಗಲೇ ಹಕ್ಕು ಪತ್ರ ವಿತರಿಸಲು ಸಿದ್ಧತೆಯಲ್ಲಿವೆ. ಕಲೆವಿಬ್ಬರ ದಾಖಲೆ ಪತ್ರ ಒದಗಿಸದ ಪರಿಣಾಮ ವಿತರಿಸಲು ವಿಳಂಬವಾಗಿದೆ ಎಂದು ಪೌರಾಯುಕ್ತರು ತಿಳಿಸಿದರು.ಅದಕ್ಕೆ ಆ ಜನಗಳ ಹತ್ತಿರ ಯಾವುದೇ ದಾಖಲೆ ಇಲ್ಲ. ಆದರೆ ಸುಮಾರು ವರ್ಷಗಳಿಂದ ಅಲ್ಲಿಯೇ ವಾಸಿಸುತ್ತಿದ್ದಾರೆ ಎಂದು ಶಾಸಕರ ಗಮನಕ್ಕೆ ತಂದರು.

ಶಾಸಕರು ಕೂಡಲೇ ತಹಸೀಲ್ದಾರ ಅವರಿಂದ ವಾಸವಾಗಿರುವ ಜನಗಳ ಬಗ್ಗೆ ದಾಖಲೆ ಪಡೆದುಕೊಂಡು ಹಕ್ಕು ಪತ್ರ ವಿತರಿಸಬೇಕೆಂದು ಪೌರಾಯುಕ್ತರಿಗೆ ಹೇಳಿದರು. ನಿಯೋಗದಲ್ಲಿ ಎಸ್ಯುಸಿಐ(ಸಿ) ಪಕ್ಷದ ಸದಸ್ಯ ರಾಘವೇಂದ್ರ.ಎಮ್.ಜಿ,ಜಗನ್ನಾಥ.ಎಸ್.ಹೆಚ್, ತಿಮ್ಮಯ್ಯ ಮಾನೆ, ಪ್ರವೀಣ ಬಣಮೀಕರ್, ಸಿದ್ದು ಚೌಧರಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here