ಸುರಪುರ: ಯಾವುದೆ ಹಬ್ಬಗಳು ಸಮಾಜದಲ್ಲಿ ಪರಸ್ಪರ ಸ್ನೇಹ ಮತ್ತು ಸಾಮರಸ್ಯವನ್ನು ಮೂಡಿಸುವಂತಿರಬೇಕು, ಭಾರತೀಯ ಸಂಸ್ಕೃತಿಯಲ್ಲಿ ಎಲ್ಲಾ ಧರ್ಮ, ಜಾತಿಗಳ ಮದ್ಯೆ ಪರಸ್ಪರ ಗೌರವ ಮತ್ತು ಸೌಹಾರ್ಧತೆಯಿದೆ.ಅದನ್ನು ನಮ್ಮ ಸುರಪುರದಲ್ಲೂ ಎತ್ತಿ ಹಿಡಿಯುವ ಮೂಲಕ ಇತರರಿಗೆ ಮಾದರಿಯಾಗಿರುವಂತೆ ಶಾಂತಿ ಮತ್ತು ಸೌಹಾರ್ಧತೆಯಿಂದ ರಮಜಾನ್ ಹಬ್ಬ ಆಚರಿಸುವಂತೆ ಆರಕ್ಷಕ ನಿರೀಕ್ಷಕ ಆನಂದರಾವ್ ತಿಳಿಸಿದರು.
ರಮಜಾನ್ ಹಬ್ಬ ಆಚರಣೆ ಅಂಗವಾಗಿ ನಗರದ ಠಾಣೆಯಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯ ನೇತೃತ್ವ ವಹಿಸಿ ಮಾತನಾಡಿ,ನಗರದ ಎಲ್ಲೆಲ್ಲಿ ಪ್ರಾರ್ಥನೆ ಸಲ್ಲಿಸುವ ಸ್ಥಳಗಳಿವೆಯೊ ಅಲ್ಲೆಲ್ಲ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ಪ್ರಾರ್ಥನೆಗೆ ಅನುವು ಮಾಡಿಕೊಡಲಾಗುವುದು.ತಾವುಗಳು ಶಾಂತಿಯಿಂದ ಹಬ್ಬದ ಆಚರಣೆಗಳನ್ನು ಮಾಡುವ ಮೂಲಕ ನಾಡಿಗೆ ಶಾಂತಿ ನೆಮ್ಮದಿ ಲಭಿಸಲೆಂದು ಪ್ರಾರ್ಥಿಸುವಂತೆ ಕೊರಿದರು. ಇದೇ ಸಂದರ್ಭದಲ್ಲಿ ಸಂಘಟನಾ ಮುಖಂಡರಾದ ಅಬ್ದುಲ್ ಅಲಿಂ ಗೋಗಿ,ವೆಂಕೋಬ ದೊರೆ ಬೊಮ್ಮನಹಳ್ಳಿ ಮಾತನಾಡಿದರು.
ಸಭೆಯಲ್ಲಿ ಮಹಿಬೂಬ ಖುರೇಶಿ,ರಾಹುಲ್ ಹುಲಿಮನಿ,ಅಪ್ಸರ್ ಹುಸೇನ,ಅಬ್ದುಲ್ ಸಮನ್ ಮುಲ್ಲಾ,ಮಹ್ಮದ ಆಸೀಫ್ ಹುಸೇನ, ಮಹ್ಮದ ಖಮರುಧ್ಧೀನ್,ಖಾಲಿದ್ ಅಹ್ಮದ್ ತಾಳಿಕೋಟಿ,ಅಬ್ದುಲ್ ಗಫೂರ ನಗನೂರಿ, ಮಹ್ಮದ ಇಸ್ಮಾಯಿಲ್, ಮಹ್ಮದ ಅಬ್ದುಲ್ ಶೇಠ್,ಯಂಕಪ್ಪ ಕಮತಗಿ,ಬಸಪ್ಪ ಚಿಕನಹಳ್ಳಿ,ಮರೆಪ್ಪ ಕನ್ನೆಳ್ಳಿ,ಪರಶುರಾಮ ಅರಶಿಕೇರಿ,ಮಲ್ಲಪ್ಪ ಬಿರಾದಾರ,ಬಸವರಾಜ ಕವಡಿಮಟ್ಟಿ,ಜಾಕೀರ್ ಹುಸೇನ್,ಆಶಪ್ಪ ಯಾದವ,ಅಂಬಣ್ಣ ದೊರೆ, ಯಲ್ಲಪ್ಪ ಚಿಕ್ಕನಹಳ್ಳಿ ಹಾಗು ಪೊಲೀಸ್ ಸಿಬ್ಬಂದಿಗಳಾದ ಚಂದ್ರಶೇಖರ,ಈರಣ್ಣ ಜಮಾದಾರ,ಮನೋಹರ ರಾಠೋಡ, ಸೋಮಯ್ಯ ಸ್ವಾಮಿ,ಮಹಾಂತೇಶ ಬಿರಾದಾರ,ರವಿಕುಮಾರ ಏವೂರ ಸೇರಿದಂತೆ ಅನೇಕರಿದ್ದರು.