ಜೇವರ್ಗಿ: ಕೇಂದ್ರ ಸರ್ಕಾರವು ದುಡಿಯುವ ವರ್ಗದ ಜನರ ಅಳಲನ್ನು ಕೇಳುತ್ತಿಲ್ಲ, ನೂತನ ಅವೈಜ್ಞಾನಿಕ ಕಾನೂನು ರೂಪಿಸುವ ಮೂಲಕ ಕಾರ್ಮಿಕರ ಹಸಿದ ಹೊಟ್ಟೆಯ ಮೇಲೆ ಬರೆ ಹಾಕುತ್ತಿದೆ. ಇದು ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ತೋರಿಸುತ್ತದೆ ಇದೊಂದು ದಮನಕಾರಿ ನೀತಿ ಎಂದು ಕಾರ್ಮಿಕರ ಸಂಘಟನೆಯ ಸದಸ್ಯರು ಹಾಗೂ ಎಪಿಎಂಸಿ ಕಾರ್ಮಿಕರು ಪ್ರತಿಭಟನೆ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಎಪಿಎಂಸಿಹಲವಾರು ಹಮಾಲಿ ಹಾಗೂ ಅಸಂಘಟಿತ ಕೂಲಿ ಕಾರ್ಮಿಕರ ನೇತೃತ್ವದಲ್ಲಿ ಅಸಮಾಧಾನ ಹೊರಹಾಕಿ, ಲಾಕ್ಡೌನ್ ಪರಿಣಾಮದಿಂದ ಹಮಾಲಿ ಕಾರ್ಮಿಕರ ಬದುಕು ದುಸ್ತರವಾಗಿದೆ, ಅಲ್ಲದೆ ಕನಿಷ್ಠ ವೇತನವನ್ನು ಹಾಗೂ ಕೂಲಿಯನ್ನು ನಿಗದಿಪಡಿಸುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ಕಾರ್ಮಿಕರಿಗೆ ಪಿಂಚಣಿಯನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು , ಕಾರ್ಮಿಕರ ವಸತಿ ಯೋಜನೆಯನ್ನು ಕಾರ್ಯಗತಗೊಳಿಸಲು ಸೂಪರ್ ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ಮಕ್ಕಳು ಶಿಕ್ಷಣಕ್ಕಾಗಿ ಉತ್ತಮ ಶಾಲೆಯನ್ನು ಹಾಗೂ ಆರೋಗ್ಯ ರಕ್ಷಣೆಗಾಗಿ ಆರೋಗ್ಯಸೇವೆಯನ್ನು ಒದಗಿಸಬೇಕೆಂದು ಆಗ್ರಹಿಸಿ ಸಲ್ಲಿಸಿದರು.
ನೂತನ ಕಾರ್ಮಿಕರ ಸುಗ್ರೀವಾಜ್ಞೆ ಹೊರಡಿಸಿರುವುದನ್ನು, ಕಾರ್ಮಿಕರ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹಮಾಲಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೂರು, ಪ್ರಾಂತ ರೈತ ಸಂಘದ ಸುಭಾಷ್ ಹೊಸಮನಿ, ಲಕ್ಕಪ್ಪ ರದ್ದೇವಾಡಗಿ, ಮೌನೇಶ್ ಹೊನ್ನೂರ್, ರಾಮಲಿಂಗ ಸುಲೇಮಾನ್ ಈರಪ್ಪ ಹಾಗೂ ನಿಂಗಣ್ಣ ಸೇರಿದಂತೆ ಶಿವಕುಮಾರ್ ಇತರ ಕಾರ್ಮಿಕರು ಭಾಗವಹಿಸಿದ್ದರು.