ಮಹಿಳಾ ಶಿರಸ್ತೆದಾರರ ಮೇಲೆ ತಹಶಿಲ್ದಾರಿಂದ ಲೈಂಗಿಕ ಕಿರುಕುಳ ಆರೋಪ: ತನಿಖೆಗೆ ಡಿಸಿ ಆದೇಶ

0
135

ರಾಯಚೂರು. ತಹಶಿಲ್ದಾರರು ತಮ್ಮ ಕಚೇರಿಯಲ್ಲಿನ ಮಹಿಳಾ ಶಿರಸ್ತೆದಾರರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಲೈಂಗಿಕ ಕಿರುಕುಳ ನಿವಾರಣಾ ಸಮಿತಿ ಅಧಿಕಾರಿಗೆ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ ಆದೇಶಿಸಿದ್ದಾರೆ‌.

ಜಿಲ್ಲೆಯ ಮಾನ್ವಿ ತಹಶೀಲ್ದಾರ ಅವರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದ್ದು, ಕಿರುಕುಳ ನೀಡದ ಕುರಿತು ಪೋಲಿಸ್ ಠಾಣೆಗೆ ದೂರು ನೀಡಲು ಹೋದಾಗ ತೆಗೆದುಕೊಂಡಿಲ್ಲ ಇದರಿಂದ ಬೇಸತ್ತು ಮಹಿಳಾ ಶಿರಸ್ತೆದಾರರು ಜಿಲ್ಲಾಧಿಕಾರಿಗೆ ದೂರು ನೀಡಿ ನ್ಯಾಯ ಒದಗಿಸಬೇಕು ಎಂದು ಕೇಳಿಕೊಂಡಿದ್ದಾರೆ.

Contact Your\'s Advertisement; 9902492681

ಜಿಲ್ಲಾ ಮಟ್ಟದ ಅಧಿಕಾರಿಗೆ ಕಿರುಕುಳ ನೀಡಿದ ದೂರನ್ನು ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಸಿಡಿಯೊಂದಿಗೆ ವರದಿಯನ್ನು ಲೈಂಗಿಕ ಕಿರುಕುಳ ನಿವಾರಣಾ ಸಮಿತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗೆ ಆದೇಶ ನೀಡಿದ್ದಾರೆ.

  • ವರದಿ: ಮುತ್ತಣ್ಣ ರಾಯಚೂರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here