ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ಆಶಾಕಿರಣ ಕೇಂದ್ರ ಸಚಿವ ಸುರೇಶ್ ಅಂಗಡಿ: ವೀರಣ್ಣ ಯಾರಿ

0
65

ಕಲಬುರಗಿ: ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ಆಶಾಕಿರಣರಾಗಿದ್ದರು ಎಂದು ವಾಡಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ ಹೇಳಿದರು,

ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಆಯೋಜಿಸಿ ಶ್ರದ್ಧಾಂಜಲಿ ಸಭೆಯಲ್ಲಿ ಸುರೇಶ್ ಅಂಗಡಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು, ಸುರೇಶ್ ಅಂಗಡಿಯವರು ಮಾನವೀಯತೆ ಗುಣವುಳ್ಳ ಅತ್ಯುತ್ತಮ ಹೆಮ್ಮೆಯ ನಾಯಕರಲ್ಲಿ ಒಬ್ಬರಾಗಿದ್ದರು, ಅತ್ಯಂತ ಕೆಳಮಟ್ಟದ ಸಾಮಾನ್ಯ ಕಾರ್ಯಕರ್ತರಿಗೆ ಸ್ಪಂದಿಸುವಂತಾ ಒಳ್ಳೆಯ ಗುಣ ಅವರಲ್ಲಿತ್ತು. ಅವರ ನಿಧನದ ಸುದ್ದಿ ತುಂಬಾ ಆಘಾತ ಉಂಟುಮಾಡಿದೆ ಎಂದು ಸಂತಾಪ ವ್ಯಕ್ತಪಡಿಸಿದರು.

Contact Your\'s Advertisement; 9902492681

ಪುರಸಭೆ ವಿರೋಧ ಪಕ್ಷದ ನಾಯಕ ಪ್ರಕಾಶ ನಾಯಕ, ಪರಸಭೆ ಸದಸ್ಯರಾದ ಭೀಮಶಾ ಜೀರೊಳ್ಳಿ, ರಾಜೇಶ್ ಅಗ್ರವಾಲ, ಮುಖಂಡರಾದ ವಿಠಲ ನಾಯಕ, ಗಿರಿಮಲ್ಲಪ್ಪ ಕಟ್ಟಿಮನಿ, ಕಿಶನ್ ಜಾದವ್, ಪ್ರಕಾಶ ದಂಡೋತಿ, ಮಲ್ಲಿಕಾರ್ಜುನ ವಳಂಡಿ ಸೇರಿದಂತೆ ಇತರರು ಶ್ರದ್ಧಾಂಜಲಿ ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here