ನಿಡುಮಾಮಿಡಿ ಪೀಠದ ಶ್ರೀಗಳ ಪತ್ರಿಕಾ ಹೇಳಿಕೆ ಅವರ ಮೇಲಿನ ನಂಬುಗೆ ಬುಡಮೇಲು ಮಾಡಿದೆ: ಪಾಸ್ವಾನ

0
90

ಕಲಬುರಗಿ: ಬೆಂಗಳೂರಿನ ನಿಡುಮಾಮಿಡಿ ಮಾನವ ಧರ್ಮ ಪೀಠದ ಡಾ. ವೀರಭದ್ರ ಚನ್ನಮಲ್ಲ ಶಿವಾಚಾರ್ಯರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನಾಯಕತ್ವ ಬದಲಾವಣೆ ಮಾಡಿದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸುಮಾರು ನಾಲ್ಕು ದಶಕಗಳ ಕಾಲ ಕೋಮುವಾದಿ ಶಕ್ತಿಯ ವಿರುದ್ಧ ಹೋರಾಡಿದ ಡಾ. ವೀರಭದ್ರ ಚನ್ನಮಲ್ಲ ಶಿವಾಚಾರ್ಯರ ಈ ಪತ್ರಿಕಾ ಹೇಳಿಕೆ ಸಖೇದಾಶ್ಚರ್ಯ ಉಂಟು ಮಾಡಿದೆ ಎಂದು ಬಸವರಾಜ ಪಾಸ್ವಾನ ಹೇಳಿದ್ದಾರೆ.

Contact Your\'s Advertisement; 9902492681

ಕೋಮುವಾದಿ ಪಕ್ಷದ ಒಂದು ಭಾಗವಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಸಮರ್ಥಿಸಿಕೊಳ್ಳುವ ಶ್ರೀಗಳ ವಿಚಾರ ಚರ್ಚೆಗೆ ಗ್ರಾಸವಾಗಿದೆ ಎಂದ ಅವರು ಶ್ರೀಗಳ ಈ ವಿಚಾರ ಅವರ ಮೇಲೆ ನನ್ನಂಥ ಅನೇಕರ ನಂಬುಗೆಯನ್ನು ಬುಡಮೇಲು ಮಾಡುವಂತಾಗಿದೆ ಎಂದು ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here