ಕಲಬುರಗಿ: ಸಬ್ಯ, ಸೌಮ್ಯ, ಸ್ವಭಾವದ ಜನಪ್ರಿಯ ನಾಯಕ ಹಿರಿಯ ನಾಯಕರು ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದ ಸುದ್ದಿ ನಂಬಲಿಕ್ಕೆ ಸಾದ್ಯವಿಲ್ಲ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ರವರು ಸಂತಾಪ ಸೂಚಿಸಿದರು.
ಸ್ನೇಹ ಜೀವಿಯಾಗಿದ್ದ ಸುರೇಶ್ ಅಂಗಡಿ ರಾಜ್ಯದ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದರು. ಇವರ ನಿಧನವು ನಿಜಕ್ಕೂ ದಿಗ್ಭ್ರಮೆಯನ್ನುಂಟು ಮಾಡಿದೆ. ಸುರೇಶ ಅಂಗಡಿಯವರ ನಿಧನದಿಂದ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನಷ್ಟವಾಗಿದೆ ಎಂದರು.