ಕಲಬುರಗಿ; ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆಯನ್ನು ಜಾರಿಗೆ ರೈತರರೋಂದಿಗೆ ಚರ್ಚಿಸದೇ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡು ರೈತ ವಿರೋಧಿ ಧೋರಣೆಯನ್ನು ಖಂಡಿಸಿ ಹಾಗೂ ಈ ಕಾಯ್ದೆಗಳನ್ನು ಕೂಡಲೆ ವಾಪಸ್ಸು ಪಡೆಯಲ್ಲು ಆಗ್ರಹಿಸಿ ಸೆ.28 ರಂದು ರೈತರ ಹಾಗೂ ಹಲವಾರು ರೈತ ಪರ ಸಂಘಟನೆಗಳು ನಡೆಸುವ ಹೋರಾಟಕ್ಕೆ ನಮ್ಮ ಸೇನೆವು ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಜೈ ಕನ್ನಡಿಗರ ಸೇನೆ ಸಂಸ್ಥಾಪಕ ಅಧ್ಯಕ್ಷ ದತ್ತು ಹೆಚ್ ಭಾಸಗಿ ಅವರು ತಿಳಿಸಿದ್ದಾರೆ.
ರೈತರ ಹೋರಾಟಕ್ಕೆ ಜೈಕರವೇ ಬೆಂಬಲ: ಭೂ ಸುಧಾರಣಾ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ, ರೈತಪರ ಸಂಘಟನೆಗಳು ನಡೆಸುತಿರುವ ಹೋರಾಟಕ್ಕೆ ಜೈ ಕನ್ನಡಿಗರ ರಕ್ಷಣಾ ವೇದಿಕೆ ಬೆಂಬಲಿಸಿದೆ. ರಾಜ್ಯ ಸರ್ಕಾರ ಏಪಕ್ಷೀಯ ನಿರ್ಧಾರ ಕೈ ಗೊಂಡಿರುವುದು ಸರಿಯಲ್ಲ. ರೈತಾಪಿ ವರ್ಗಕ್ಕೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ನಿಟ್ಟಿನಲ್ಲಿ ರೈತರ ಪರವಾಗಿ ತಾವು ನಿಲ್ಲುವುದಾಗಿ ವೇದಿಕೆ ಅಧ್ಯಕ್ಷ ಸಚಿನ್ ಫರಹತಾಬಾದ್ ತಿಳಿಸಿದ್ದಾರೆ