ಶಹಾಪುರ: ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲ್ಲೂಕಿನ ಬಹುತೇಕ ಗ್ರಾಮಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ.ರೈತ ಬಿತ್ತಿ ಬೆಳೆದ ಜಮೀನಿನಲ್ಲಿ ನೀರು ನಿಂತು ಬೆಳೆದ ಬೆಳೆ ನೆಲಕಚ್ಚಿದ್ದು ಒಂದೆಡೆಯಾದರೆ ವಾಸವಿದ್ದ ಮನೆಯು ನೆಲಕ್ಕುರುಳಿ ಸೂರು ಇಲ್ಲದಂತಾಗಿದೆ ರೈತಾಪಿ ವರ್ಗದ ಮೇಲೆ ಬದುಕು ಬೀದಿ ಪಾಲಾದ೦ತಾಗಿದೆ.
ಗ್ರಾಮದ ಹಳ್ಳ,ಕೊಳ್ಳಗಳು ಮೈದು೦ಬಿ ಹರಿಯುತ್ತಿವೆ,ರಸ್ತೆಗಳು ಜಲಾವೃತಗೊ೦ಡಿವೆ,ರಸ್ತೆ ಮೇಲಿರುವ ಡಾ೦ಬರ ಕಿತ್ತು ಹೋಗಿ ಸಂಚಾರಕ್ಕೆ ತುಂಬಾ ತೊಂದರೆಯಾಗುತಿದೆ.ಅಲ್ಲದೆ ಮನೆಗಳಿಗೆ ನೀರು ನುಗ್ಗಿ ಹೊರಗಡೆ ಬಾರದೆ ಪರದಾಡಿದ ಘಟನೆಯೂ ನಡೆದಿದೆ, ಮನೆಯಲ್ಲಿರುವ ದವಸ ಧಾನ್ಯಗಳು ನೀರುಪಾಲಾಗಿ ಬದುಕು ಕಷ್ಟಕರವಾಗಿದೆ.
ರೈತ ಸಾಲ ಮಾಡಿ ಜಮೀನಿನಲ್ಲಿ ಬೆಳೆದಿರುವೆ ಬೆಳೆಗೆ ಉತ್ತಮ ಫಸಲು ನೀಡಲಿ ಎಂಬ ಉದ್ದೇಶದಿಂದ ರಸಗೊಬ್ಬರ ಕೀಟನಾಶಕ ಸಿಂಪಡಿಸಿದ್ದ ನಿನ್ನೆ ಸುರಿದ ಮಳೆಗೆ ಸಂಪೂರ್ಣ ತೊಳೆದುಕೊ೦ಡು ಹೋಗಿದೆ, ಮತ್ತಷ್ಟು ಸಾಲದ ಭಾರ ರೈತ ಅನುಭವಿಸುವ೦ತಾಗಿದೆ, ಕೃಷಿಯನ್ನೇ ನಂಬಿಕೊಂಡಿದ್ದ ರೈತನಿಗೆ ಬರಸಿಡಿಲು ಬಡಿದ೦ತಾಗಿದೆ.ಬೆಳೆದಿರುವ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿ.ರೈತಾಪಿ ವರ್ಗ ಅಕ್ಷರಶಃ ರೋಸಿ ಹೋಗಿ ಇವರ ಬದುಕಿನ ಪರಿಸ್ಥಿತಿ ಹೇಳತೀರದು.