ಶಹಾಬಾದ:ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ಹೊರಟಿರುವ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಸೇರಿದಂತೆ ಇತರ ಸುಗ್ರಿವಾಜ್ಞೆ ಕಾಯ್ದೆಗಳನ್ನು ಕೈಬಿಡುವಂತೆ ವಿವಿಧ ಸಂಘಟನೆಗಳ ಒಕ್ಕೂಟದಿಂದ ಸೆ. 28 ರಂದು ಕರೆ ನೀಡಿರುವ ಕರ್ನಾಟಕ ಬಂದಗೆ ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿ ಬೆಂಬಲಿಸಲು ನಿರ್ಧರಿಸಿದೆ.
ನಗರದ ಕನ್ನಡ ಭವನದಲ್ಲಿ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಸಂಸ, ಸಿಐಟಿಯು,ಕೆಪಿಆರ್ಎಸ್, ಆರ್ಕೆಎಸ್, ಎಐಯುಟಿಯುಸಿ, ಎಐಡಿಎಸ್ಒ, ಎಐಡಿವಾಯ್ಒ, ಎಐಎಮ್ಎಮ್ಎಸ್, ತಾಮೆರ್ ಮಿಲತ್ ಸಂಘ, ಬಿಸಿಯೂಟ ನೌಕರರ ಸಂಘ, ಹಸಿರು ಸೇನೆ ಹಾಗೂ ರೈತ ಮುಖಂಡರು ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು.
ವಿವಿಧ ಸಂಘಟನೆಗಳ ಒಕ್ಕೂಟದಿಂದ ಸೆಪ್ಟೆಂಬರ್ 28ರಂದು ಬೆಳಿಗ್ಗೆ 10 ಗಂಟೆಗೆ ಬಸವೇಶ್ವರ ವೃತ್ತದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಸರಕಾರಿ ಪ್ರೌಢ ಶಾಲೆ ಬಳಿ ಸಮಾವೇಶಗೊಂಡು ತಾಲೂಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲು ನಿರ್ಧರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಶರಣಗೌಡ ಪಾಟೀಲ, ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಅಶೋಕ ಮ್ಯಾಗೇರಿ, ಮಲ್ಲಿಕಾರ್ಜುನ ಪಟ್ಟಣಕರ, ಎಸ್ಯಸಿಐಸಿ ಮುಖಂಡ ಗಣಪತರಾವ ಮಾನೆ, ಮಹ್ಮದ ಮಸ್ತಾನ, ಜೆಡಿಎಸ್ ಪಕ್ಷದ ಕಾರ್ಯದರ್ಶಿ ಲೋಹಿತ ಕಟ್ಟಿ, ಕುರುಬ ಸಮಾಜದ ತಾಲೂಕ ಅಧ್ಯಕ್ಷ ಮಲ್ಕಣ್ಣ ಮುದ್ದಾ, ಪ್ರಾಂತ ರೈತ ಸಂಘದ ತಾಲೂಕಾ ಸಂಚಾಲಕ ರಾಯಪ್ಪ ಹುರುಮುಂಜಿ,ಮಲ್ಲಣ್ಣ ಕಾರೊಳ್ಳಿ, ಸಂಪತ ಕುಮಾರಿ, ಸುನೀತಾ ಕೋರೆ, ಶಿವರುದ್ರ ಭೇಣಿ, ಗುರು ರೇವಣಸಿದ್ದಪ್ಪ ಪೂಜಾರಿ, ನರಸಿಂಹಲು ರಾಯಚೂರಕರ, ಅರೀಫ್ ಎಕ್ಬಾಲ್ ಇತರರು ಪಾಲ್ಗೊಂಡಿದ್ದರು.