ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮ ಸಹಾಯಕರಿಗೆ ಆದರ್ಶ-ಮದ್ರಿಕಿ

0
114

ಶಹಾಬಾದ:ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ ತನ್ನ ಜೀವನವನ್ನೇ ಬಲಿದಾಗೈದ ಸ್ವಾತಂತ್ರ್ಯ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗ್ರಾಮ ಸಹಾಯಕರಿಗೆ ಆದರ್ಶವಾಗಬೇಕೆಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಿಲ್ಲಾಧ್ಯಕ್ಷ ಬಸವರಾಜ ಮದ್ರಿಕಿ ಹೇಳಿದರು.

ಅವರು ನಗರದ ತಹಸೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾದ ಗ್ರಾಮಸಹಾಯಕ ಸಂಘದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಗ್ರಾಮ ಸಹಾಯಕ (ವಾಲೀಕಾರ) ಮನೆತನದಿಂದ ಬಂದ ಸಂಗೊಳ್ಳಿ ರಾಯಣ್ಣ ಕಿತ್ತೂರಿನ ರಕ್ಷಣೆ ಜತೆಗೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸಿದವರು.ಅಂತಹ ಮಹಾನ ವ್ಯಕ್ತಿಯ ಪ್ರೇರಣೆಯಿಂದ ಗ್ರಾಮ ಸಹಾಯಕರು ರಾಯಣ್ಣನ ಭಾವಚಿತ್ರವಿಟ್ಟು ಸಮಾರಂಭಗಳನ್ನು ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.

ಬ್ರಿಟಿಷ ಕಾಲದಿಂದಲೂ ಸೇವಾ ಪ್ರಾಮುಖ್ಯತೆ ಹೊಂದಿರುವ ಗ್ರಾಮ ಸಹಾಯಕರು ಈಗಲೂ ಗೌರವಯುತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಕಡಿಮೆ ವೇತನ ಪಡೆದು ನೆಮ್ಮದಿಯಿಂದ ಜೀವನ ಸಾಗಿಸುವುದು ಇಂದಿನ ಕಾಲದಲ್ಲಿ ಬಹುಕಷ್ಟ.ಆದ್ದರಿಂದ ಅವರ ವೇತನ ಹೆಚ್ಚಬೇಕು.ಅವರನ್ನು ಡಿ ಗ್ರೂಪ್ ದರ್ಜೆಗೇರಿಸಿ ಸೇವಾ ಭದ್ರತೆ ನೀಡಬೇಕು.ಸೇವಾ ಖಾಯಂಮಾತಿ ಆಗಬೇಕು.ಆದರೆ ಸರಕಾರ ಮಾತ್ರ ಇವರ ಕೂಗು ಕೇಳುತ್ತಿಲ್ಲ. ಕೂಡಲೇ ಸರಕಾರ ಇವರ ಧ್ವನಿಯನ್ನು ಕೇಳಿ ಇವರ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಬೇಕಾಗಿದೆ ಎಂದರು.

ಗ್ರಾಮ ಸಹಾಯಕ ಸಂಘದ ಜಿಲ್ಲಾಧ್ಯಕ್ಷ ಮರಲಿಂಗ, ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕೊಡದೂರ, ಜಿಲ್ಲಾ ಉಪಾಧ್ಯಕ್ಷ ರಾಜ ಅಹ್ಮದ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶಾ ಹೊಸೂರಕರ್, ಜಿಲ್ಲಾ ಸಲಹೆಗಾರ ಶಿವಲಿಂಗ ಕೊಲ್ಲೂರ, ಜೇವರ್ಗಿ ತಾಲೂಕಾಧ್ಯಕ್ಷ ನಿಂಗಣ್ಣ ಹಾಗೂ ಇತರ ತಾಲೂಕಾಧ್ಯಕ್ಷರು ಹಾಜರಿದ್ದರು.

ಇದೇ ಸಂದರ್ಭದಲ್ಲಿ ಶಹಾಬಾ ತಾಲೂಕಿನ ಗ್ರಾಮಸಹಾಯಕ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ತಾಲೂಕಾಧ್ಯಕ್ಷ-ಮಲ್ಲಿಕಾರ್ಜುನ ತೊನಸನಹಳ್ಳಿ, ಗೌರವಾಧ್ಯಕ್ಷ- ಶಂಕರ, ಪ್ರಧಾನಕಾರ್ಯದರ್ಶಿ – ಲಕ್ಷ್ಮಿಕಾಂತ ಹಾಗೂ ಮಲ್ಲಿಕಾಜರ್ುನ ಮುತ್ತಗಿ ಅವರನ್ನು ಆಯ್ಕೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here