ಕನ್ನಡಕ್ಕಾಗಿ ವೀರಮರಣವನ್ನಪ್ಪಿದ ಕಟ್ಟಾಳು ರಂಜಾನ್ ಸಾಹೇಬ್ ಪುಣ್ಯ ಸ್ಮರಣೆ ನಿಮಿತ್ತ ಹಣ್ಣು, ಸಿಹಿ ವಿತರಣೆ

0
43

ಯಾದಗಿರಿ : ಹುಣಸಗಿ ಪಟ್ಟಣದಲ್ಲಿ ಇಂದು ಯಾದಗಿರಿ ಜಿಲ್ಲಾ ಪಿಂಜಾರ ವಿವಿದೊಧ್ಧೇಶ ಸೇವಾ ಸಂಘದ ಹುಣಸಗಿ ತಾಲೂಕು ಘಟಕದ ವತಿಯಿಂದ ಶ್ರೀ ವಿರೇಂದ್ರ ಪಾಟೀಲ್ ವೃದ್ಧಾಶ್ರಮದಲ್ಲಿ ಕನ್ನಡಕ್ಕಾಗಿ ವೀರಮರಣವನ್ನಪ್ಪಿದ ಕಟ್ಟಾಳು ರಂಜಾನ್ ಸಾಹೇಬ್ ಪುಣ್ಯಸ್ಮರಣೆ ಅಂಗವಾಗಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಯುವ ನಾಯಕ ಸೋಪಿಸಾಬ ಡಿ ಸುರಪುರ ಇವರು ಹಣ್ಣು& ಸಿಹಿ ವಿತರಣೆ ಮಾಡಿದರು.

ರಾಜ್ಯೋತ್ಸವದ ಇಂತಹ ಸಂದರ್ಭದಲ್ಲಿ ಇವರನ್ನ ನೆನೆಯುವದು ನಮ್ಮ ಕರ್ತವ್ಯ. ಜೊತೆಗೆ, ಇಂದಿನ ಪೀಳಿಗೆಯ ಯುವಜನತೆಗೆ ಅಷ್ಟಾಗಿ ಗೊತ್ತಿಲ್ಲದ ಪೈಲ್ವಾನ್ ರಂಜಾನ್ ಸಾಹೇಬರು ಕನ್ನಡಿಗರ ಹೃದಯದಲ್ಲಿ ಅಜರಾಮರ ಎಂದು ಕೂಗಿ ಹೇಳುವ ಸಮಯವಾಗಿದೆ ಎಂದರು.

Contact Your\'s Advertisement; 9902492681

ಅನೇಕ ವೀರರು ಕನ್ನಡ ನಾಡಿನ ಉಳಿವಿಗಾಗಿ ಪ್ರಾಣ ಬಲಿದಾನಗಳ ಮೂಲಕ ತಾಯ್ನೆಲದ ಋಣವನ್ನು ತೀರಿಸಿ, ಕರ್ನಾಟಕದ ಏಕೀಕರಣದಲ್ಲಿ ಪಾಲುದಾರರಾಗಿದ್ದಾರೆ ಎಂದು ಯುವ ನಾಯಕ ಸೋಫಿಸಾಬ ಡಿ ಸುರಪುರ ಹೇಳಿದರು. ಕಾರ್ಯದರ್ಶಿ ಹುಸೇನಸಾಬ ಎಂ ಗಾದಿ, ಖಂಜಾಚಿ ರಾಜೇಸಾಬ ಬಿ ನದಾಫ, ವೃದ್ಧಾಶ್ರಮದ ಮುಖ್ಯಸ್ಥರು ಜಗನ್ನಾಥ್ ಪಾಟೀಲ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here