ಮಂಗಳೂರು: ಮಹಿಳೆಯರ ಮೇಲಿನ ಸರಣಿ ಅತ್ಯಾಚಾರ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ವತಿಯಿಂದ ವಿದ್ಯಾರ್ಥಿನಿಯರಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯೆ ಮಿಶ್ರಿಯಾ ಮಾತನಾಡಿ ‘ದಿನಪ್ರತಿ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರವು ಹೆಚ್ಚುತ್ತಿದೆ ಅದರಲ್ಲೂ ಬಿಜೆಪಿಯ ಯೋಗಿ ಆಳುತ್ತಿರುವ ಉತ್ತರ ಪ್ರದೇಶದಲ್ಲಿ ಹಣ್ಣಿನ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಸರಣಿ ಅತ್ಯಾಚಾರ ನಡೆಯುತ್ತಿದ್ದರೂ ಸರಕಾರದ ಮೌನವು ಮಹಿಳಾ ಸಮಾಜವನ್ನು ನಿಬ್ಬೆರಗಾಗಿಸಿದೆ ಎಂದರು’.
ವಿದ್ಯಾರ್ಥಿನಿಯರು ಸರಕಾರದ ವಿರುದ್ಧ ಘೋಷಣೆ ಕೂಗಿ, ಬಿತ್ತಿ ಪತ್ರ ಪ್ರದರ್ಶಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಮುಖರಾದ ಫಾತಿಮ, ಸಫ್ರೀನಾ, ಶಹನಾಝ್ ಮತ್ತಿತರರು ಉಪಸ್ಥಿತಿತರಿದ್ದರು.