ಹುಬ್ಬಳ್ಳಿ: ಗಾಂಧಿ ಜಯಂತಿ ನಿಮಿತ್ಯವಾಗಿ ರಾಜ್ಯದಲ್ಲಿ ರೈತ ಅನುವುಗಾರರ ಮುಂದಿನ ಹೋರಾಟದ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಹಾಗೂ ಜಿಲ್ಲಾಧ್ಯಕ್ಷರ ಸಭೆಯನ್ನು ಹುಬ್ಬಳ್ಳಿಯ ಜಗದ್ಗುರು ಮೂರುಸಾವಿರ ಮಠದ ಸಭಾಭವನದಲ್ಲಿ ನಡೆಯಿತು.
ಸಭೆಗೆ ಪ್ರಾಸ್ತಾವಿಕವಾಗಿ ಮಾತನಾಡಿದ ಕರ್ನಾಟಕ ವಿಜಯ ಸೇನೆ ಜಿಲ್ಲಾಧ್ಯಕ್ಷರಾದ ಗಣೇಶ ಬಾರಕೇರ ಸ್ವಾಗತ ಕೋರಿದರು, ನಂತರ ಸಭೆಯನ್ನು ಉದ್ಘಾಟಿಸಿದ ಶ್ರಮಜೀವಿಗಳ ವೇದಿಕೆ ರಾಜ್ಯ ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠ ಅವರು ಮಾತನಾಡಿ ಕೃಷಿ ಸಚಿವರಾದ ಶ್ರೀ B C ಪಾಟೀಲರ ರೈತ ಅನುವುಗಾರರ ಬಗ್ಗೆಯ ನಿಲುವು ಸ್ಪಷ್ಟವಿಲ್ಲ ರೈತ ಕುಟುಂಬದಿಂದ ಬಂದ ಇವರು ಕಳೆದ 12 ವರ್ಷಗಳಿಂದ ಕೃಷಿ ಇಲಾಖೆಯಲ್ಲಿ ಹೆಳಮಟ್ಟದಿಂದ ರೈತರಿಗೆ ಇಲಾಖೆಯ ಯೋಜನೆ ಹಾಗೂ ಇತರೆ ಪೂರಕ ಮಾಹಿತಿ ನೀಡುತ್ತಿದರು ಇವರನ್ನು ಕಡೆಗಣಿಸುತ್ತಿರುವುದು ರೈತ ಅನುವುಗಾರರ ವಿರೋಧಿಯಾಗಿದು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸನ್ನದರಾಗಬೇಕೆಂದು ಕರೆ ನೀಡಿದರು.
ಅಲ್ಲದೇ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಮುಂಬೈ-ಕರ್ನಾಟಕ ವಿಭಾಗಕ್ಕೆ ಗಣೇಶ ಬಾರಕೇರ ಅವರನ್ನ ಸಂಚಾಲಕ, ಕಲ್ಯಾಣ- ಕರ್ನಾಟಕಕ್ಕೆ ಶರಣು ಹಕಾರೆ ಮೈಸೂರು ವಿಭಾಗ, ಗಂಗಾಧರಪ್ಪ H ಕರಾವಳಿ ವಿಭಾಗಕ್ಕೆ ತಿರುಮಲ ನಾಯ್ಕ ಅವರನ್ನು ರಾಜ್ಯದಲ್ಲಿ ನಾಲ್ಕು ವಿಭಾಗಗಳನ್ನಾಗಿ ವಿಂಗಡಿಸಿ ಸದಸ್ಯರನ್ನು ಆಯ್ಕೆ ಮಾಡಿದರು.
ನಂತರ ಸಭೆಗೆ ಬಂದಿದ್ದ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ತಮ್ಮ ನಿಲುವು ಸಲಹೆ ಸೂಚನೆಗಳನ್ನು ನೀಡಿ ರಾಜ್ಯದಲ್ಲಿ ನಮಗೆ ಆಗುತ್ತಿರುವ ವಿರುದ್ಧ ನ್ಯಾಯವನ್ನು ಕೋಡಿಸು ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವ ಚಂದ್ರಶೇಖರ ಹಿರೆರಮಠ ಸರ್ ತೆಗೆದುಕೋಳು ಎಲ್ಲಾ ನಿರ್ಧಾರಗಳಿಗೆ ರಾಜ್ಯದ ಎಲ್ಲಾ ರೈತ ಅನುವುಗಾರರ ಬದ ಇರುತ್ತವೆ ಎಂದು ಸಭೆಯಲ್ಲಿ ಸ್ಪಷ್ಟಪಡಿಸಿದರು.
ಈ ಸಂದರ್ಬದಲ್ಲಿ ಗಂಗಾಧರಪ್ಪ ಎಚ್, ಚಂದ್ರು ಎಚ್ ,ಲಕ್ಷ್ಮಿ ತಳವಾರ, M ಸೋಮಪ್ಪ,ಶರಣು ನಾಯ್ಕ ಹಾಗೂ ಮುಂತಾದವರು ಜಿಲ್ಲಾಧ್ಯಕ್ಷರು ಉಪಸ್ಥಿತಿರಿದ್ದರು.