ಆಳಂದ: ಹಿತ್ತಲಶಿರೂರ ಕ.ರ.ವೇ ಗ್ರಾಮ ಘಟಕ ಉದ್ಘಾಟನೆ

0
65

ಆಳಂದ: ತಾಲೂಕಿನ ಹಿತ್ತಲಶಿರೂರ ಗ್ರಾಮದಲ್ಲಿ ಶುಕ್ರವಾರ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕ ಉದ್ಘಾಟನೆ ನಡೆಯಿತು.

ಮೊದಲಿಗೆ ಬಸವೇಶ್ವರರ ಪುತ್ಥಳಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನಡೆಸಲಾಯಿತು. ನಂತರ ಕಲ್ಮೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಇತ್ತೀಚೆಗೆ ಕನ್ನಡಿಗರನ್ನು ಅಗಲಿದ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯರಿಗೆ ಮೌನಾಚರಣೆ ಸಲ್ಲಿಸಿ ಗೌರವ ಸೂಚಿಸಲಾಯಿತು.ನಂತರ ಕ.ರ.ವೇ ತಾಲೂಕಾಧ್ಯಕ್ಷ ಮಹಾಂತೇಶ ಸಣ್ಣಮನಿ ಕಾರ್ಯಕ್ರಮ ಉದ್ಘಾಟಿಸಿದರು.

Contact Your\'s Advertisement; 9902492681

ನಿಂಬರ್ಗಾ ವಲಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಮಹಾಂತೇಶ ಸಣ್ಣಮನಿ ನಾಡಿನ ನೆಲ,ಜಲ,ಸಾಹಿತ್ಯ, ಇತಿಹಾಸವನ್ನು ಉಳಿಸಿ ಬೆಳೆಸಲು ಕನ್ನಡಿಗರು ಮುಂದಾಗಬೇಕೆಂದು ಸಲಹೆ ನೀಡಿದರು. ತಾಲೂಕಾ ಉಪಾಧ್ಯಕ್ಷರಾದ ಮಹಿಬೂಬ್  ಪಣಿಬಂದ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಧಾಧಿಕಾರಿಗಳ ನೇಮಕ-ಹಿತ್ತಲಶಿರೂರ ಗ್ರಾಮ ಘಟಕ ಅಧ್ಯಕ್ಷರಾಗಿ ಚಂದ್ರಕಾಂತ ಅವಟೆ ಯವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸಂತೋಷ ಪೋ.ಪಾಟೀಲ್, ರೈತ ಘಟಕ ಅಧ್ಯಕ್ಷರಾಗಿ ಅಣ್ಣಾರಾವ ಪೋ.ಪಾಟೀಲ್, ಕಾರ್ಯದರ್ಶಿಯಾಗಿ ಕಲ್ಯಾಣಿ ಪೂಜಾರಿ,ವಿದ್ಯಾರ್ಥಿ ಘಟಕ ಅಧ್ಯಕ್ಷರಾಗಿ ಸಂತೋಷ ಸರಸಂಬಿ, ಕಾರ್ಮಿಕ ಅಧ್ಯಕ್ಷರಾಗಿ ಕಲ್ಯಾಣಿ ದೇವಕಾರಿ,ಯುವ ಮೋರ್ಚಾ ಅಧ್ಯಕ್ಷರಾಗಿ ಬಾಬು ಕಂಭಾರ, ಸಂಚಾಲಕರಾಗಿ ವಿಠಲ್ ಹಾವಳಗಿ, ಖಜಾಂಚಿಯಾಗಿ ಶೇಖರ್ ಉಳ್ಳೆ ಯವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲ್ಲೂಕು ಪ್ರ.ಕಾರ್ಯದರ್ಶಿ ಪ್ರಭು ಪಾಟೀಲ್, ಮಾಡ್ಯಾಳ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಮಾ.ಹಿಪ್ಪರ್ಗಾ ಅಧ್ಯಕ್ಷ ಶರಣಯ್ಯ ಸ್ವಾಮಿ,ಝಳಕಿ ಅಧ್ಯಕ್ಷ ಭಿಮಾಶಂಕರ ಮೈಂದರ್ಗಿ, ನಿಂಬರ್ಗಾ ರೈತ ಅಧ್ಯಕ್ಷ ಧರ್ಮರಾಯ ವಗ್ದರ್ಗಿ, ಮದಗುಣಕಿ ರೈತ ಅಧ್ಯಕ್ಷ ಬಾಬುರಾವ್ ಪಾಟೀಲ್, ನಿಂಬರ್ಗಾ ಯುವ ಘಟಕ ಅಧ್ಯಕ್ಷ ಪ್ರವೀಣ್ ಮಿಟೆಕಾರ, ಉಪಾಧ್ಯಕ್ಷ ಮಡಿವಾಳಪ್ಪ ಮಡಿವಾಳ,ನಿಂಬರ್ಗಾ ಅಧ್ಯಕ್ಷ ಶ್ರೀಶೈಲ ನಿಗಶೆಟ್ಟಿ, ಮಹಾದೇವ ಮಿಟೆಕಾರ, ವಿನೋದ್ ಕುಮಾರ್, ಅನಿಲ್ ಕುಮಾರ್ ಸ್ವಾಮಿ, ಮಹಾದೇವ ಸ್ವಾಮಿ, ಶಂಕರ ಝಳಕಿ, ಭಿಮಾಶಂಕರ ಝಳಕಿ,ಶಿವಲಿಂಗಯ್ಯ ಮಾಡ್ಯಾಳ ಹಾಗೂ ಅನೇಕ ಕ.ರ.ವೇ ಕಾರ್ಯಕರ್ತರು ಉಪಸ್ಥಿತರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here