ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಜೆಸ್ಕಾಂ ಉಪವಿಭಾಗ ಮುಂದೆ ಕಾರ್ಮಿಕರ ಪ್ರತಿಭಟನೆ

0
119

ಶಹಾಬಾದ:ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ವಿರೋಧಿಸಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘ ಮತ್ತು ಸಂಘ ಸಂಸ್ಥೆಗಳ ಒಕ್ಕೂಟದಲ್ಲಿ ವತಿಯಿಂದ ಸೋಮವಾರ ನಗರದ ಜೆಸ್ಕಾಂ ಉಪವಿಭಾಗ ಕಛೇರಿಯ ಮುಂದೆ ಕಪ್ಪು ಪಟ್ಟಿ ಕಟ್ಟಿಕೊಂಡು ಸಾಂಕೇತಿಕ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯದರ್ಶಿ ನಾಗಪ್ಪ ಕುಂಬಾರ, ಕೇಂದ್ರ ಸರಕಾರ ಮಹಾಮಾರಿ ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣಗೊಳಿಸುತ್ತಿರುವುದು ಕಾರ್ಮಿಕರ ವಿರೋಧಿ ನೀತಿಯಾಗಿದೆ. ಈ ತಿದ್ದುಪಡಿ ಹಿಂದೆ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣ ಖಾಸಗೀಕರಣ ಮಾಡುವ ಹುನ್ನಾರ ಇದ್ದು, ಮುಖ್ಯಮಂತ್ರಿಗಳು ಈ ತಿದ್ದುಪಡಿ ಕಾಯ್ದೆಗೆ ಯಾವುದೇ ಕಾರಣಕ್ಕೂ ಸಮ್ಮತಿ ಸೂಚಿಸಬಾರದು.ತಿದ್ದುಪಡಿ ತಂದರೆ ರೈತರು, ಸಣ್ಣ ಪುಟ್ಟ ಉದ್ಯಮಿಗಳು, ಬಡತನ ರೇಖೆಗಿಂತ ಕೆಳಗಿರುವ ಗ್ರಾಹಕರಿಗೆ ತೊಂದರೆಯಾಗಲಿದೆ. ಅಲ್ಲದೇ ವಿದ್ಯುತ್ ಪ್ರಸರಣ ನಿಗಮದ ಕಾರ್ಮಮಿಕರಿಗೆ ಮರಣಶಾಸನವಾಗುತ್ತದೆ ಎಂದರು.ಆದಕಾರಣ ಕೂಡಲೇ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ಹಿಂಪಡೆಯಬೇಕು. ಕೇವಲ ಇಂದು ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದೆ. ಒಂದು ವೇಳೆ ಹಿಂಪಡೆಯದಿದ್ದರೇ ವಿದ್ಯುತ್ ಬಂದ್ ಮಾಡಿ, ಹೋರಾಟ ನಡೆಸಿದರೇ ಮುಂದಿನ ಸ್ಥಿತಿಗತಿ ಏನಾಗುತ್ತದೆ ಎಂದು ಅರಿತುಕೊಂಡು ಮುಂದಿನ ಹೆಜ್ಜೆ ಇಡಬೇಕೆಂದು ಎಚ್ಚರಿಸಿದರು.

Contact Your\'s Advertisement; 9902492681

ಸಂಘದ ಎಸ್ಸಿ/ಎಸ್ಟಿ ಘಟಕದ ಉಪಾಧ್ಯಕ್ಷ ಕಾಶಿನಾಥ ದೇವರಮನಿ ಹಾಗೂ ಹಣಮಂತರಾಯ ಲೆಕ್ಕಾಧಿಕಾರಿಗಳು ಮಾತನಾಡಿ, ರೈತರ ಪರ ಎಂದು ಹೇಳಿ ಅಧಿಕಾರಕ್ಕೆ ಬರುವ ಪಕ್ಷಗಳು ಸಕರ್ಾರ ರಚಿಸಿದ ನಂತರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಖಾಸಗೀಕರಣದಿಂದ ಮೊದಲು ರೈತರಿಗೆ ಅನ್ಯಾಯವಾಗುತ್ತದೆ.ಈಗ ಉಚಿತವಾಗಿ ಪಡೆಯುತ್ತಿರುವ ಕೃಷಿ ಪಂಪಸೆಟ್ ಮತ್ತು ಭಾಗ್ಯ ಜ್ಯೋತಿ ಸಂಪರ್ಕಗಳಿಗೆ ಮುಂದೆ ವಿದ್ಯುತ್ ಬಿಲ್ ಪಾವತಿಸಬೇಕಾಗುತ್ತದೆ.ಅಲ್ಲದೇ ಬಡವರಿಗೆ ಸಿಗುತ್ತಿರುವ ಉಚಿತ ವಿದ್ಯುತ್, ಗೃಹಬಳಕೆಗೆ ಸಿಗುತ್ತಿರುವ ಸಬ್ಸಿಡಿ ವಿದ್ಯುತ್ ಇನ್ನು ಮುಂದೆ ಸಿಗುವುದಿಲ್ಲ.ಖಾಸಗಿ ಕಂಪನಿಗಳು ತಮಗೆ ಇಷ್ಟ ಬಂದ ರೀತಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಲಿದೆ. ಇಲಾಖೆಯಲ್ಲಿನ ನೌಕರರು ಹಾಗೂ ಕಾರ್ಮಿಕರ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಸೈದ್ ಅನ್ವರ್, ಸಂಘದ ನಗರ ಅಧ್ಯಕ್ಷ ಶ್ರೀನಿವಾಸ ಕಂಠಿ, ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸಂಘದ ತಾಲೂಕಾಧ್ಯಕ್ಷ ವಸಂತಕುಮಾರ ಚೂರಿ, ಸಿದ್ದಪ್ಪ ಹಂಚಿನಾಳ, ಮಹೇಶಕುಮಾರ, ಅನೀಲಕುಮಾರ ಚವ್ಹಾಣ ವಾಡಿ, ಮಲ್ಲಿಕಾರ್ಜುನ ಹಲಕರ್ಟಾ, ಪ್ರಾಣೇಶ ಕುಲಕರ್ಣಿ ನಾಲವಾರ, ಸೈಯದ್ ಯುನೂಸ ಖಾನ, ಗೋಪಾಲ ತೆಗನೂರ್ ಇಂಗಳಗಿ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here