ತಳವಾರ ಹಾಗೂ ಪರಿವಾರ ಜನಾಂಗದವರಿಗೆ ಎಸ್ಟಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ

0
122

ಶಹಾಬಾದ:ತಳವಾರ ಹಾಗೂ ಪರಿವಾರ ಜನಾಂಗದವರಿಗೆ ಎಸ್ಟಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ನಗರ ಹಾಗೂ ಗ್ರಾಮೀಣ ಕೋಲಿ ಸಮಾಜದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರು ನಗರದ ಬಸವೇಶ್ವರ ವೃತ್ತದಿಂದ ನೆಹರು ವೃತ್ತದವರೆಗೆ ಪ್ರತಿಭಟನೆ ನಡೆಸಿ ನಂತರ ಉಪತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

Contact Your\'s Advertisement; 9902492681

ಪ್ರತಿಭಟನಾಕಾರರು ಮಾತನಾಡಿ, ತಳವಾರ ಹಾಗೂ ಪರಿವಾರ ಸಮುದಾಯದವರು ಆಥರ್ಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವುಗಳಾಗಿದ್ದು, ಈ ಎಲ್ಲ ಮಾನದಂಡಗಳ ಮೇಲೆ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರ್ಪಡೆ ಮಾಡಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದರು.ಅದರಂತೆ ರಾಜ್ಯದಲ್ಲಿ ಸಕರ್ಾರವು ಕೆಲವು ದಿನಗಳವರೆಗೆ ಎಸ್ಟಿ ಪ್ರಮಾಣ ಪತ್ರ ನೀಡಿದ್ದಾರೆ.ನಂತರ ರಾಜ್ಯದಲ್ಲಿ ಅಧಿಕಾರಿಗಳು ಪ್ರಮಾಣ ಪತ್ರ ನೀಡಲು ತಡೆ ಹಿಡಿದಿದ್ದಾರೆ.ಇದರಿಂದ ತಳವಾರ ಹಾಗೂ ಪರಿವಾರ ಸಮಾಜದವರಿಗೆ ಅನ್ಯಾಯವಾಗಿದೆ. ಕೂಡಲೇ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ತಳವಾರ ಹಾಗೂ ಪರಿವಾರ ಸಮುದಾಯದವರಿಗೆ ಎಸ್ಟಿ ಪ್ರಮಾಣ ನೀಡಲು ಅಧಿಕಾರಿಗಳಿಗೆ ಸೂಚಿಸಬೇಕು.ಇಲ್ಲದಿದ್ದರೇ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಬಿಜಾಪೂರ ಕೋಲಿ ಸಮಾಜ ಮುಖಂಡರು ಶಿವಾಜಿ ಮೇಟಗಾರ, ತೊನಸನಹಳ್ಳಿಯ ಕೊತ್ತಲಪ್ಪ ಮುತ್ಯಾ, ಯಾನಾಗುಂದಿಯ ಶ್ರೀಗಳು, ನಗರ ಹಾಗೂ ಗ್ರಾಮೀಣ ಕೋಲಿ ಸಮಾಜದ ಅಧ್ಯಕ್ಷ ಶಿವಕುಮಾರ ತಳವಾರ, ಶರಣು ಹಲಕರ್ಟಿ, ತಳವಾರ ಮತ್ತು ಪರಿವಾರ ಎಸ್ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸರದಾರ ರಾಯಪ್ಪ, ಹೊನಗುಂಟಾ ಕೋಲಿ ಸಮಾಜದ ಅಧ್ಯಕ್ಷ ದೇವೆಂದ್ರ ಕಾರೊಳ್ಳಿ, ಮಲ್ಕಣ್ಣ ಮುದ್ದಾ,ಬಸವರಾಜ ಮದ್ರಿಕಿ, ಅಶೋಕ ಮ್ಯಾಗೇರಿ, ಆನಂದ ಕೊಡಸಾ, ಕಾಶಣ್ಣ ಚನ್ನೂರ್,ಲೋಹಿತ ಮಳಖೇಡಕರ್, ಶಿವು ಬುರ್ಲಿ,ವಿಶ್ವರಾಜ ಫಿರೋಜಬಾದ,ಶಿವಕುಮಾರ ಕಾರೊಳ್ಳಿ ಮಾತನಾಡಿದರು.ರಾಜು ಸಣಮೋ, ನಾಗರಾಜ ಯಡ್ರಾಮಿ, ಶಿವಕುಮಾರ ನಾಟೇಕಾರ,ಬೆಳ್ಳಪ್ಪ ಖಣದಾಳ, ಮೌನೇಶ ಕೊಡ್ಲಿ, ಲಕ್ಷ್ಮಿಕಾಂತ ಮಸಭೋ,ಸುನೀತಾ ತಳವಾರ, ರಾಯಪ್ಪ ಹುರಮುಂಜಿ ಮರಲಿಂಗ ಗಂಗಭೋ, ರಾಜೇಶ ಯನಗುಂಟಿಕರ್ ಸೇರಿದಂತೆ ಅನೇಕ ಜನರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here