ಕೋವಿಡ್-೧೯ ಸೋಂಕಿತರ ಚಿಕಿತ್ಸೆಗೆ ವೆಂಟಿಲೇಟರ್, ಬೆಡ್ ಸಮಸ್ಯೆ ಇಲ್ಲ: ವಿ.ವಿ.ಜ್ಯೋತ್ಸ್ನಾ

0
49

ಕಲಬುರಗಿ: ಕೊರೋನಾ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲೆಯ ಸರ್ಕಾರಿ ಅಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದ್ದು, ವೆಂಟಿಲೇಟರ್ ಅಥವಾ ಹಾಸಿಗೆ ಲಭ್ಯತೆಯ ಯಾವುದೇ ಸಮಸ್ಯೆಯಿಲ್ಲ ಎಂದು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾತಿಳಿಸಿದರು.

ಮಂಗಳವಾರ ಅವರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Contact Your\'s Advertisement; 9902492681

ಕೊರೋನಾ ರೋಗಿಗಳ ಚಿಕಿತ್ಸೆಗೆಂದು ಜಿಲ್ಲೆಯಲ್ಲಿ ೯೨ ವೆಂಟಿಲೇರ್‌ಗಳಿದ್ದು, ಇದರಲ್ಲಿ ಪ್ರಸ್ತುತ ೧೨ ವೆಂಟಿಲೇಟರ್ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ೮೦ ವೆಂಟಿಲೇರ್ ರೋಗಿಗಳ ಸೇವೆಗೆ ಸಿದ್ಧ ಇವೆ. ಹೀಗಾಗಿ ವೆಂಟಿಲೇಟರ್ ಕೊರತೆಯಿಲ್ಲ. ಇದಲ್ಲದೆ ಪ್ರಸ್ತುತ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆಗೆ ಶೇ.೨೦ರಷ್ಟು ಖಾಲಿ ಹಾಸಿಗೆ ಸಹ ಲಭ್ಯಗಳಿವೆ ಎಂದರು.

ಹೆಚ್ಚು ರೋಗ ಲಕ್ಷಣವಿಲ್ಲದ ಕೊರೋನಾ ಸೋಂಕಿತರಿಗೆ ಜಿಲ್ಲೆಯ ೭-೮ ಕೋವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನದಲ್ಲಿ ಸೋಂಕಿನ ತೀವ್ರತೆ ಕಂಡುಬಂದಲ್ಲಿ ಇನ್ನೂ ೨೦ ಕೋವಿಡ್ ಕೇರ್ ಸೆಂಟರ್ ತೆರೆಯಲು ಈಗಾಗಲೆ ಸ್ಥಳಗಳನ್ನು ಗುರುತಿಸಲಾಗಿದೆ ಎಂದರು.

ಮಾಸ್ಕ್ ಹಾಕಿಕೊಳ್ಳುವುದನ್ನು ಮರೆಯದಿರಿ: ಕೊರೋನಾ ತಡೆಗಟ್ಟಲು ಸಾಮಾಜಿಕ ಅಂತರ ಪರಿಪಾಲನೆ, ಸ್ಯಾನಿಟೈಸ್ ಬಳಕೆ ಹಾಗೂ ಮಾಸ್ಕ್ ಧರಿಸುವುದು ಪ್ರಸ್ತುತ ಇರುವ ಮೂರು ಮಾರ್ಗಗಳಿವೆ. ಸಾರ್ವಜನಿಕರು ಸೋಂಕಿನ ತೀವ್ರತೆ ಅರಿತು ನಡೆಯಬೇಕು, ಇದನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಸಿಮಿ ಮರಿಯಮ್ ಜಾರ್ಜ್, ಡಿ.ಸಿ.ಪಿ. ಕಿಶೋರ ಬಾಬು, ಅಪರ ಜಿಲ್ಲಾಧಿಕಾರಿ ಡಾ.ಶಂಕರ ವಣಿಕ್ಯಾಳ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here