ಸುರಪುರ: ಮತದಾರರ ಪಟ್ಟಿಗೆ ಹೊಸಬರನ್ನು ಸೇರ್ಪಡೆಗೊಳಿಸಲು ಅನೇಕರು ಅರ್ಜಿ ಸಲ್ಲಿಸುತ್ತಿರುವ ಹಿನ್ನೆಲೆಯಲ್ಲಿ ತಹಸೀಲ್ ಕಚೇರಿಯ ಕಂದಾಯ ಇಲಾಖೆ ಹಾಗು ಚುನಾವಣಾ ವಿಭಾದ ಸಿಬ್ಬಂದಿಗಳು ನೂತನವಾಗಿ ಸಲ್ಲಿಸುವ ಅರ್ಜಿಗಳ ಪರಿಶೀಲನೆ ಕಾರ್ಯವನ್ನು ಆರಂಭಸಿದರು.
ತಾಲೂಕಿನ ಮಂಗಿಹಾಳ ಗ್ರಾಮದಲ್ಲಿ ಇಂದು ಪರಿಶೀಲನೆ ನಡೆಸಿದ ಅಧಿಕಾರಿಗಳು ಅಲ್ಲಿಯ ಕೆಲವರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಲ್ಲಿಸಿದ ಅರ್ಜಿಗಳ ಕುರಿತು ಪರಿಶೀಲನೆ ನಡೆಸಿದರು.ಈ ಸಂದರ್ಭದಲ್ಲಿ ಅನೇಕರು ಸಲ್ಲಿಸಿದ ಅರ್ಜಿಗಳಲ್ಲಿ ಕೆಲವರು ೧೮ ವರ್ಷ ವಯಸ್ಸಿನವರಲ್ಲದನ್ನು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮೂಲಕ ಪತ್ತೆಹಚ್ಚಿ ಅರ್ಜಿಯನ್ನು ತಿರಸ್ಕರಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ವಿಠ್ಠಲ್ ಮಾತನಾಡಿ,ಸಾರ್ವಜನಿಕರು ಯಾರಾದರು ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸುವವರು ವಯಸ್ಸಿನ ಸರಿಯಾದ ದಾಖಲೆಯನ್ನು ಸಲ್ಲಿಸಿ ಇಲ್ಲವಾದಲ್ಲಿ ನಕಲಿ ಅಥವಾ ವಯಸ್ಕರಲ್ಲದವರು ಅರ್ಜಿ ಸಲ್ಲಿಸಿದ್ದರೆ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಅಲ್ಲದೆ ನಕಲಿ ದಾಖಲೆಗಳನ್ನು ಸಲ್ಲಿಸಿದ್ದರೆ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮಲೆಕ್ಕಾಧಿಕಾರಿ ಮುಬಾರಕ್ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಬಿಎಲ್ಒಗಳು ಸೇರಿದಂತೆ ಗ್ರಾಮದ ಜನರು ಭಾಗವಹಿಸಿದ್ದರು.