ಉತ್ತರ ಪ್ರದೇಶ ಘಟನೆ ಖಂಡಿಸಿ ಹುಣಸಗಿಯಲ್ಲಿ ಸಾಮೂಹಿಕ ಸಂಘಟನೆಗಳ ಪ್ರತಿಭಟನೆ

0
35

ಸುರಪುರ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಘಟನೆಯನ್ನು ಖಂಡಿಸಿ ಹುಣಸಗಿ ಪಟ್ಟಣದಲ್ಲಿ ಸಾಮೂಹಿಕ ಸಂಘಟನೆಗಳ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಮಹಾಂತಸ್ವಾಮಿ ವೃತ್ತದಿಂದ ಪ್ರಮುಖ ಬೀದಿಯ ಮೂಲಕ ತಹಸೀಲ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಹೋರಾಟಗಾರರು ಅತ್ಯಾಚಾರಿಗಳ ವಿರುಧ್ಧ ಹಾಗು ಉತ್ತರ ಪ್ರದೇಶದ ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Contact Your\'s Advertisement; 9902492681

ನಂತರ ತಹಸೀಲ್ ಕಚೇರಿ ಮುಂದೆ ಕೆಲಕಾಲ ಧರಣಿ ನಡೆಸಿ ಮಾತನಾಡಿದ ಮುಖಂಡರು,ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ಅನ್ಯಾಯ ಕೊಲೆಗಳು ಹಾಗು ಮಹಿಳೆಯರ ಮೇಲೆ ನಿರಂತವಾಗಿ ಅತ್ಯಾಚಾರಗಳು ನಡೆಯುತ್ತಿವೆ,ಆದರೆ ಅಲ್ಲಿಯ ಯೋಗಿ ಆದಿತ್ಯನಾಥರ ಸರಕಾರ ದಲಿತರ ಮೇಲಿನ ಹಲ್ಲೆಯನ್ನು ತಡೆಯಲು ಹಾಗು ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು ಸಂಪೂರ್ಣ ವಿಫಲವಾಗಿದೆ.ಸ್ವತಃ ಅಲ್ಲಿಯ ಮುಖ್ಯಮಂತ್ರಿ ಹೇಳುತ್ತಾರೆ ನಾವು ಗೋವುಗಳನ್ನು ರಕ್ಷಣೆ ಮಾಡುತ್ತೇವೆ ಆದರೆ ಮಹಿಳೆಯರನ್ನಲ್ಲ ಎನ್ನುತ್ತಾರೆ,ಆದರೆ ತಾವು ಜನಸಿದ್ದು ಒಬ್ಬ ಮಹಿಳೆಯಿಂದ ಎಂಬುದನ್ನು ಮರೆಯಬಾರದು ಎಂದರು. ನಂತರ ತಹಸೀಲ್ ಸಿರಸ್ತೆದಾರ ಮೂಲಕ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಸಲ್ಲಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ಮಹಾದೇವಮ್ಮ ಬೇವಿನಾಳಮಠ ಕೃಷಿಕ ಸಮಾಜದ ಉಪಾಧ್ಯಕ್ಷ ನಾಗಣ್ಣ ಸಾಹು ದಂಡಿನ್ ಸಿದ್ದಣಗೌಡ ಕರಿಬಾವಿ ದಶರಥ ದೊರೆ ಕಚಕನೂರ ಹಣಮಂತ್ರಾಯ ಒದರೆ ಬಸವರಾಜ ವಾಯ್ ಜಿರಾಳ ಬಸನಗೌಡ ಪಾಟೂಕ್ ಅಣ್ಣಪ್ಪ ಅಗ್ನಿ ಹಣಮಂತ್ರಾಯ ಮಾಲಿಪಾಟೀಲ್ ಶೇಖರ ನಾಯಕ ಅಶೋಕ ಮಲ್ಲಿಕಾರ್ಜುನ ಬಸವರಾಜ ಹಗರಟಿಗಿ ರಾಜ ಡಿ.ಬೋವಿ ಸಂಗು ಬಾಚಿಮಟ್ಟಿ ಲಾಲಸಾಬ ನದಾಫ್ ಬಸನಗೌಡ ಮಾಲಿಪಾಟೀಲ್ ಮಲ್ಲಿಕಾರ್ಜುನ ಮಾಲಿಪಾಟೀಲ್ ಬಸವರಾಜ ಚನ್ನೂರ್ ರಸುಲಸಾಬ್ ಬೆಣ್ಣೂರ್ ಭೀಮಣ್ಣ ನಾಟೆಕಾರ್ ವೀರಭದ್ರಪ್ಪ ಅಂತರಗಂಗಿ ಪರಶುರಾಮ ಚೌಧರಿ ಜಮ್ಮಣ್ಣ ಗುಡಿಮನಿ ಶರಣಪ್ಪಗೌಡ ಅಗ್ನಿ ಶರಣು ಮಲ್ಲಾಬಾವಿ ನಾಗರಾಜ ದೊಡ್ಡಮನಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here