ವರ್ಗಾವಣೆ ಪತ್ರದ ಜಾತಿ ಕಾಲಮಿನಲ್ಲಿ ಪಿಂಜಾರ ಎಂದು ನಮೂಸಿ: ಅಹೈಮದ್ ಪಠಾಣ್

0
75

ಸುರಪುರ: ಇಂದು ರಾಜ್ಯದಲ್ಲಿನ ಪಿಂಜಾರ ಸಮುದಾಯವು ತೀರಾ ಹಿಂದುಳಿದಿದ್ದು ಸರಕಾರ ಪಿಂಜಾರರ ಅಭಿವೃಧ್ಧಿಗೆ ಅವಕಾಶ ನೀಡಿದರು ಅಧಿಕಾರಿಗಳು ಅದನ್ನು ದೊರೆಯದಂತೆ ಮಾಡುತ್ತಿದ್ದಾರೆ ಎಂದು ಪಿಂಜಾರ ವಿವಿಧೋದ್ಧೇಶ ಸಂಘದ ಜಿಲ್ಲಾಧ್ಯಕ್ಷ ಅಹ್ಮದ್ ಪಠಾಣ್ ಬೇಸರ ವ್ಯಕ್ತಪಡಿಸಿದರು.

ಪಿಂಜಾರ ವಿವಿಧೋಧ್ಧೇಶ ಸಂಘದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಪಿಂಜಾರರು ಅಥವಾ ನದಾಫರ ಧರ್ಮದಿಂದ ಮುಸ್ಲೀಂ ಆದರೆ ಜಾತಿಯಿಂದ ಪಿಂಜಾರರಾಗಿದ್ದು ಇದು ಪ್ರವರ್ಗ-೧ ರಲ್ಲಿ ಬರುತ್ತದೆ.ಇದನ್ನು ತಿಳಿಯದವರಂತೆ ಇರುವ ಅನೇಕ ಶಾಲೆಗಳ ಶಿಕ್ಷಕರು ನಮ್ಮ ಪಿಂಜಾರ ಸಮುದಾಯದ ಮಕ್ಕಳ ಶಾಲಾ ದಾಖಲಾತಿಯಲ್ಲಿ ಹೆಸರು ನಮೂದಿಸುವಾಗ ವರ್ಗಾವಣೆ ಪ್ರಮಾಣ ಪತ್ರದ ಧರ್ಮದ ಕಾಲಮಿನಲ್ಲಿ ಮುಸ್ಲೀಂ ಎಂದು ಜಾತಿ ಕಾಲಮಿನಲ್ಲಿಯೂ ಮುಸ್ಲೀಂ ಎಂದು ಬರೆಯುವ ಮೂಲಕ ನಮ್ಮ ಪಿಂಜಾರ ಅಥವಾ ನದಾಫ ಎಂಬುದನ್ನು ಮರೆ ಮಾಚುವಂತೆ ಮಾಡುತ್ತಿದ್ದಾರೆ.

Contact Your\'s Advertisement; 9902492681

ಆದರೆ ಇದು ನಮ್ಮ ಸಮುದಾಯದ ವಿದ್ಯಾರ್ಥಿಗಳ ಏಳಿಗೆಗೆ ದೊಡ್ಡ ಪೆಟ್ಟು ನೀಡುತ್ತಿದೆ.ಸರಕಾರ ಜಾತಿ ಕಾಲಮಿನಲ್ಲಿ ಪಿಂಜಾರ ಎಂದು ಬರೆಯಿಸಲು ಅವಕಾಶ ನೀಡಿದೆ ಆದರೆ ಶಿಕ್ಷಕರು ನಮಗೆ ಸಮಸ್ಯೆ ಉಂಟು ಮಾಡುತ್ತಿದ್ದಾರೆ.ಈ ಮುಂದೆ ಯಾವುದೇ ನಮ್ಮ ಸಮುದಾಯದ ವಿದ್ಯಾರ್ಥಿಗಳ ಹೆಸರನ್ನು ದಾಖಲಿಸಿಕೊಳ್ಳುವಾದ ಜಾತಿ ಕಾಲಮಿನಲ್ಲಿ ಪಿಂಜಾರ ಅಥವಾ ನದಾಫ ಎಂದು ಬರೆಯುವಂತೆ ಮನವಿ ಮಾಡುತ್ತೇವೆ.ಈ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಉಗ್ರ ಪ್ರತಿಭಟನೆ ಅನಿವಾರ್ಯವಾಗಲಿದೆ ಎಂದರು.

ಮನವಿಯನ್ನು ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಿರಸ್ತೆದಾರರು ಮಾತನಾಡಿ,ತಮ್ಮ ಮನವಿಯಂತೆ ಈ ಮುಂದೆ ಎಲ್ಲಾ ನಿಮ್ಮ ಸಮುದಾಯದ ಮಕ್ಕಳ ಹೆಸರು ದಾಖಲಿಸಿಕೊಳ್ಳುವಾಗ ಜಾತಿ ಕಾಲಮಿನಲ್ಲಿ ಪಿಂಜಾರ ಎಂದು ಬರೆದುಕೊಳ್ಳಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಿಂಜಾರ ಮಂಡಳ ಅಧ್ಯಕ್ಷ ಅಬ್ದುಲ್ ರಜಾಕ್ ಟಿಪ್ಪು ಸುಲ್ತಾನ ಕ್ರಾಂತಿ ಸೈನ್ಯದ ಅಧ್ಯಕ್ಷ ಖಾಜಾಂಬರ್ ನದಾಫ್ ಪಿಂಜಾರ ಸಂಘದ ತಾಲೂಕು ಅಧ್ಯಕ್ಷ ಅಬ್ದುಲ್ ಸಾಬ್ ನದಾಫ್ ಬಾವಸಾಬ್ ನದಾಫ್ ಸೋಪಿಸಾಬ್ ನದಾಫ್ ಹುಸೇನ್ ಸಾಬ್ ನದಾಫ್ ಮಾಳೂರು ಹುಸೇನಸಾಬ್ ಗೌಂಡಿ ದಸ್ತಗೀರಸಾಬ್ ಕಕ್ಕಲದೊಡ್ಡಿ ಮಹ್ಮದ ಲಾಲಸಾಬ್ ನದಾಫ್ ಇಬ್ರಾಹಿಂ ಯಡಿಯಾಪುರ ಅಬ್ದುಲ್ ನದಾಫ್ ಬಂದೇನವಾಜ್ ನದಾಫ್ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here