ವಣಕಿಹಾಳ ಕೆರೆಯಲ್ಲಿನ ನೀರು ಬೇರೆಡೆಗೆ ಸಾಗಿಸುವ ಕಾರ್ಯ ಆರಂಭಿಸಿದ ನಗರಸಭೆ

0
21

ಸುರಪುರ: ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದ ಸಂಪೂರ್ಣ ಜಲಾವೃತಗೊಂಡು ರಾಜ್ಯದ ಗಮನ ಸೆಳೆದಿದ್ದ ನಗರದ ವಾರ್ಡ ಸಂಖ್ಯೆ ೩೧ರ ಸತ್ಯಂಪೇಟೆಯ ವಣಕಿಹಾಳದಲ್ಲಿನ ಕೆರೆಯ ನೀರನ್ನು ನಗರಸಭೆಯಿಂದ ಬೇರೆಡೆಗೆ ಹರಿಯಿಸುವ ಕಾರ್ಯ ನಡೆಸಲಾಯಿತು.

ಬೆಳಿಗ್ಗೆ ೧೦ ಗಂಟೆಯ ಸುಮಾರಿಗೆ ಜೆಸಿಬಿ ಯಂತ್ರದೊಂದಿಗೆ ನಗರಸಭೆಯ ಅಧಿಕಾರಿಗಳು ಆಗಮಿಸಿ ಕೆರೆಯಲ್ಲಿನ ನೀರನ್ನು ಬೇರೆಡೆ ಹರಿಯಿಸುವ ಕಾರ್ಯ ನಡೆಸಿ ಜನರಿಗೆ ಅನುಕೂಲ ಮಾಡಿಕೊಟ್ಟರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಶಾಂತಪ್ಪ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಮುಖಂಡರಾದ ಅಯ್ಯಪ್ಪ ಅಕ್ಕಿ ಜೆಟ್ಟೆಪ್ಪ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here