ಸುರಪುರ: ಕಳೆದ ಎರಡು ತಿಂಗಳ ಹಿಂದೆ ದುಡಿದ ಕೂಲಿ ಹಣ ನೀಡುತ್ತಿಲ್ಲವೆಂದು ಆರೋಪಿಸಿ ಅರಕೇರಾ ಜೆ ಗ್ರಾಮ ಪಂಚಾಯತಿಯ ಲಕ್ಷ್ಮೀಪುರ ಗ್ರಾಮದ ಉದ್ಯೋಗ ಖಾತ್ರಿ ಕೂಲಿಕಾರರು ತಾಲೂಕು ಪಂಚಾಯತಿ ಕಚೇರಿ ಮುಂದೆ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಅನೇಕ ಜನ ಕಾರ್ಮಿಕರು ಮಾತನಾಡಿ,ನಾವು ಎರಡು ತಿಂಗಳ ಹಿಂದೆ ಉದ್ಯೋಗ ಖಾತ್ರಿ ಕೆಲಸ ಮಾಡಿದ್ದು ಇದುವರೆಗೂ ಕೂಲಿ ಹಣ ನೀಡುತ್ತಿಲ್ಲ.ಈಗ ನಮ್ಮ ಮನೆಗಳಲ್ಲಿ ಒಂದೊತ್ತಿನ ಊಟಕ್ಕೂ ಕಷ್ಟ ಪಡುವಂತಾಗಿದೆ. ಪಂಚಾಯತಿ ಅಭೀವೃಧ್ಧಿ ಅಧಿಕಾರಿಗಳಿಗೆ ಕೇಳಿದರೆ ಬರೀ ಸುಳ್ಳು ಹೇಳುತ್ತಿದ್ದಾರೆ.
ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಕೇಳಿದರೆ ನಾವು ಕೆಲಸ ಮಾಡಿದ ದಾಖಲೆ ಡಿಲಿಟ್ ಆಗಿದೆ ಎಂದು ಹೇಳುತ್ತಿದ್ದಾರೆ.ಹೀಗಾದರೆ ನಾವು ಏನು ಮಾಡುವುದು ಸದ್ಯ ನಮಗೆ ಕೆಲಸವು ಇಲ್ಲ ಕೈಯಲ್ಲಿ ಬಿಡಿಗಾಸು ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಧರಣಿ ನಿರತರ ಬಳಿಗೆ ಆಗಮಿಸಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹ ಅಧಿಕಾರಿ ಅಂಬ್ರೇಶ ಅವರು ಕಾರ್ಮಿಕರ ಸಮಸ್ಯೆಯನ್ನು ಆಲಿಸಿ ನಂತರ ಮಾತನಾಡಿ,ಇನ್ನು ಒಂದು ವಾರದೊಳಗೆ ನಿಮ್ಮೆಲ್ಲರ ಬಾಕಿ ಹಣವನ್ನು ಕೊಡುವುದಾಗಿ ಭರವಸೆ ನೀಡಿದ ನಂತರ ಧರಣಿ ನಿಲ್ಲಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಸಹಾಯಕ ನಿರ್ದೇಶಕ ವಿಶ್ವನಾಥ ಕಾರ್ಮಿಕ ಹೋರಾಟಗಾರ ಶರಣು ಅನಸೂರ ನಾಗಮ್ಮ ಅನಸೂರ ಭೀಮಬಾಯಿ ಪೀರಬಾವಿ ಗಂಗಮ್ಮ ಸುರಪೂರಕರ್ ಮಲ್ಲಮ್ಮ ಎಲಿಗಾರ ನಿಂಗಮ್ಮ ಹುಣಸಗಿ ಪದ್ಮಾವತಿ ಗಜೇಂದ್ರಗಡ ಲಕ್ಷ್ಮೀ ಸೇರಿದಂತೆ ಅನೇಕರಿದ್ದರು.