ಸುರಪುರ: ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ರೈತರು ಬೆಳೆದ ಬೆಳೆಗಳು ಮಳೆಯಿಂದಾಗಿ ಹಾಳಾಗುತ್ತಿವೆ.ತಾಲೂಕಿನ ಸತ್ಯಂಪೇಟೆ ಗ್ರಾಮದ ಅನೇಕ ರೈತರು ಬೆಳೆದ ನೂರಾರು ಎಕರೆ ಭತ್ತ ಮಳೆಯಿಂದಾಗಿ ಸಂಪೂರ್ಣ ನೆಲಕ್ಕಚ್ಚಿದ್ದು ರೈತರು ಕಂಗಾಲಾಗಿದ್ದಾರೆ.
ಈ ಕುರಿತು ರೈತ ಶರಣಪ್ಪ ಯಾಳಗಿ ಮಾತನಾಡಿ,ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ತುಂಬಾ ತೊಂದರೆಗೆ ಸಿಲುಕಿದ್ದೇವೆ,ಮಳೆ ನೀರಿನಿಂದ ನಮ್ಮ ಎಂಟು ಎಕರೆಯಲ್ಲಿ ಬೆಳೆದಿದ್ದ ಭತ್ತದ ಬೆಳೆಯು ಸಂಪೂರ್ಣ ನೆಲಕ್ಕಚ್ಚಿ ನೀರಲ್ಲಿದೆ ಅದು ನೀರಲ್ಲಿಯೆ ಕೊಳೆಯಲಿದೆ ಮೇಲೆಳುವುದಿಲ್ಲ.
ಇದೆರೀತಿ ನಮ್ಮ ಭಾಗದಲ್ಲಿನ ನೂರಾರು ಎಕರೆ ಬೆಳೆಯು ಹೀಗೆ ನೀರಲ್ಲಿವೆ ಇದರಿಂದ ರೈತರಿಗೆ ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ,ಸರಕಾರ ಬರೀ ರೈತರ ನೆರವಿಗಿರುವುದಾಗಿ ಬಾಯಿ ಮಾತಲ್ಲಿ ಹೇಳಿದರೆ ಸಾಲದು ಕೂಡಲೆ ಸರಕಾರ ರೈತರ ನೆರವಿಗೆ ಬಂದು ಹಾಳಾಗಿರುವ ಬೆಳೆಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.