ಶಿಕ್ಷಕರ ಕ್ಷೇತ್ರದ ಚುನಾವಣೆ: ಅಂತಿಮ ಕಣದಲ್ಲಿ 5 ಅಭ್ಯರ್ಥಿಗಳು

0
25

ಕಲಬುರಗಿ: ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರ ಅಕ್ಟೋಬರ್ 12 ರಂದು ಯಾವುದೇ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿರುವುದಿಲ್ಲ. ಹೀಗಾಗಿ ಅಂತಿಮವಾಗಿ ಚುನಾವಣಾ ಕಣದಲ್ಲಿ 5 ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಕ್ಷೇತ್ರದ ಚುನಾವಣಾಧಿಕಾರಿಗಳಾದ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ ಅವರು ತಿಳಿಸಿದ್ದಾರೆ.

ಜನತಾದಳ (ಜಾತ್ಯಾತೀತ) ಪಕ್ಷದಿಂದ ತಿಮ್ಮಯ್ಯಾ ಪುರ್ಲೆ, ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ಶರಣಪ್ಪ ಮಟ್ಟೂರು, ಭಾರತೀಯ ಜನತಾ ಪಕ್ಷದಿಂದ ಶಶೀಲ ನಮೋಶಿ, ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಹಾಗೂ ಪಕ್ಷೇತರ ಅಭ್ಯರ್ಥಿ ಡಾ. ಚಂದ್ರಕಾಂತ ಸಿಂಗೆ ಅವರು ಅಂತಿಮ ಕಣದಲ್ಲಿ ಉಳಿದುಕೊಂಡ ಅಭ್ಯರ್ಥಿಗಳಾಗಿದ್ದಾರೆ. ಚುನಾವಣೆಯು ಅಕ್ಟೋಬರ್ 28 ರಂದು ನಡೆಯಲಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here