ಹರಿಹರ: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಅರಣ್ಯ ಇಲಾಖೆ ಹಾಗೂ ಸರಕಾರಿ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಆಸ್ಪತ್ರೆ ಮೈದಾನದಲ್ಲಿ ಇಂದು ಬುಧವಾರ ಬೆಳಿಗ್ಗೆ 11.30 ಕ್ಕೆ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಶಾಸಕ ಎಸ್.ರಾಮಪ್ಪ ರವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ, ಪರಿಸರ ಜಾಗೃತಿ ಕುರಿತು ಮಾತನಾಡಿದ ಅವರು, ಎಲ್ಲರು ತಮ್ಮ ತಮ್ಮ ಮನೆ ಗಳ ಮುಂದೆ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕೆಂದು ಕರೆ ನೀಡಿದರು.
ಪರಿಸರ ಸಂರಕ್ಷಣೆ ಮೂಲಕ ಮಳೆಗಾಲ ಹೆಚ್ಚಾಗುವಂತೆ ಮಾಡಬೇಕೆಂದು ಕೋರಿದರು ಈ ಸಂದರ್ಬದಲ್ಲಿ ಪರಿಸರವಾದಿಗಳು ಹಾಗೂ ಸಮಾಜ ಸೇವಕ ರು, ಜಿಲ್ಲಾ ಕನ್ನಡ ಪ್ರಶಸ್ತಿ ಪುರಸ್ಕೃತ ರು ಅದ ಕೆ. ಸಿ.ಪಟೇಲ್ ರವರು, ಹೊರಪೇಟೆ,ವಿಜಯ್ ಮಹಾಂತೇಶ್, ಅಸ್ಪತ್ರೆಯ ಅಧೀಕ್ಷಕ, ಹರಿಹರದ ಅರಣ್ಯ ಇಲಾಖೆಯ ಅಧಿಕಾರಿ ನಿವಾಸ್, ಚೇತನ್ ಸೇರಿದಂತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು