ಶಹಾಬಾದ:ನಗರದ ಮಧ್ಯ ಹರಿಯುವ ಅಜನಿ ಹಳ್ಳ ಹಾಗೂ ಕಾಗಿಣಾ ನದಿ ಪ್ರವಾಹದಲ್ಲಿ ಸಿಕ್ಕಿಬಿದ್ದ ಕೂಸು ಬಾಣಂತಿ ಸಹಿತ ಒಟ್ಟು 14 ಜನರಿಗೆ ಅಗ್ನಿಶಾಮಕ ದಳದ ಸಿಬ್ಬಂದಿ ಬಚಾವ ಮಾಡಿದ್ದಾರೆ.
ಜೆಪಿ ಕಾಲೋನಿ ಸಮೀಪದ ಕಾಗಿಣಾ ನದಿ ದಂಡೆಯ ತೋಟದ ಮನೆಯಲ್ಲಿ ಸಿಕ್ಕು ಬಿದ್ದ ಬಾಣಂತಿ, 15 ದಿನದ ಕೂಸು ಸಹಿತ ಏಳು ಜನರನ್ನು ಎಸಟಿಆರೆಫ್ ತಂಡ, ಅಗ್ನಿಶಾಮಕ ದಳ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನಗರಸಭೆಯ ಸಿಬ್ಬಂದಯೊಂದಿಗೆ ಅಧಿಕಾರಿ ವರ್ಗದ ತಂಡ ಸಿಲುಕಿದವರನ್ನು ರಕ್ಷಣೆ ಮಾಡಿದ್ದಾರೆ.
ಜೆಪಿ ಕಾಲೋನಿಯ ಹತ್ತೋತಿರದ ಕಾಗಿಣಾ ನದಿಯ ಸಮೀಪದ ತೋಟದ ಮನೆಯಲ್ಲಿದ್ದ ಬಾಣಂತಿ, 15 ದಿನ ಮಗು ಸೇರಿ ಐದು ಜನರನ್ನು, ನಗರದ ಹಳೆ ಶಹಾಬಾದ ಬಡಾವಣೆಯ ಹೊರ ವಲಯದ ಹಳ್ಳದ ದಂಡೆಯ ಸಮೀಪದಲ್ಲಿರುವ ವಿಶ್ವರಾಧ್ಯರ ಮಂದಿರದಲ್ಲಿ ಪ್ರವಾಹದ ಮಧ್ಯೆ ಸಿಲುಕಿದ ಆರು ಜನರನ್ನು, ಭಂಕೂರನ ಕಾಗಿಣಾ ನದಿ ಪ್ರವಾಹದಲ್ಲಿ ಸಿಲುಕಿದ ಓರ್ವ ವ್ಯಕ್ತಿಯನ್ನು ಓಬಿಎಮ್ ಯಂತ್ರದ ರಬ್ಬರ ಬೋಟ್ ಮೂಲಕ ರಕ್ಷಣೆ ಮಾಡಿದ್ದಾರೆ.
ತಹಶೀಲ್ದಾರ ಸುರೇಶ ವರ್ಮಾ, ನಗರಸಭೆಯ ಪೌರಾಯುಕ್ತ ಡಾ. ಕೆ.ಗುರುಲಿಂಗಪ್ಪ, ಎಇಇ ಪುರುಷೋತ್ತಮ, ಎಸಟಿಆರೆಫ್ ತಂಡದ ಮುಖ್ಯಸ್ಥರಾದ ಪಿ.ಪರಶುರಾಮ, ಪಿಐ. ಬಿ.ಅಮರೇಶ.ಬಿ, ನಗರಸಭೆ ಕಂದಾಯ ಅಧಿಕಾರಿ ಸುನೀಲಕುಮಾರ, ನೈರ್ಮಲ್ಯ ನಿರೀಕ್ಷಕ ಶಿವುಕುಮಾರ ಅಗ್ನಿಶಾಮಕ ಸಿಬ್ಬಂದಿ, ನಗರ ಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು.