ಸೇತುವೆ ಮುಳುಗಡೆ ಹೊಸ ಸೇತುವೆ ನಿರ್ಮಾಣಕ್ಕೆ : ಕನ್ನಡ ಭೂಮಿ ಆಗ್ರಹ

0
120

ಕಲಬುರಗಿ: ಜಿಲ್ಲೆಯಾದ್ಯಂತ ಮತ್ತು ನಗರದ್ಯಾಂತ ಕಳೆದ ಮೂರು ನಾಲ್ಕು ದಿನಗಳಿಂದ ರಾತ್ರೀ ಸುರಿದ ಭಾರಿ ಮಳೆಗೆ ಮಹಾಗಾಂವ ಗ್ರಾಮದ ಆರಂಭದಲ್ಲಿ ಬರುವ ಮುಖ್ಯ ಸೇತುವೆಗೆ ಬಂದು ಸಂಪೂರ್ಣವಾಗಿ ಮಳೆ ನೀರಿನಿಂದ ಸೇತುವೆ ಮುಳುಗಿ ಹೋಗುತ್ತಿದೆ ಕೂಡಲೇ ಅತೀ ಎತ್ತರದ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿಯ ಪಧಾದಿಕಾರಿಗಳು ಮನವಿ ಮಾಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ಅವರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಲಬುರಗಿ ಮತ್ತು ಮಹಾಗಾಂವ ಗ್ರಾಮದ ‌ನಡುವಿನ ಪ್ರಮುಖ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದ್ದು , ಇದರ ಪರಿಣಾಮ ಈ ಹಳ್ಳದ ಸುತ್ತಮುತ್ತಲಿನ ಹೊಲ ಗದ್ದೆಗಳಲ್ಲಿ ನೀರು ತುಂಬಿವೆ. ಕೆಲ ಬೆಳೆಗಳು ಹರಿದುಕೊಂಡು ಹೋಗಿವೆ , ಮತ್ತು ಹೊಲದಲ್ಲಿ ನೀರು ಜಲಾವೃತಗೊಂಡು ಹಾನಿಯಾಗಿವೆ.

Contact Your\'s Advertisement; 9902492681

ಇದರಿಂದಾಗಿ ರಸ್ತೆ , ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಂಡಿದೆ , ಮತ್ತೆ ಇದರಿಂದಾಗಿ ಗ್ರಾಮಸ್ಥರು ವಿದ್ಯಾರ್ಥಿಗಳು , ಮಹಿಳೆಯರು , ಕೂಲಿ ಕಾರ್ಮಿಕರು ತುಂಬಾ ಕಷ್ಟ ಅನುಭವಿಸುವಂತಾಗಿದೆ. ಪ್ರತಿಸಾರಿ ಭಾರಿ ಮಳೆ ಬಂದರೆ ಸಾಕು ಗ್ರಾಮದ ಸೇತುವೆ ಮುಳುಗಡೆ ಆಗುವುದು ಗ್ಯಾರಂಟಿಯಾಗಿದ್ದು ಇದರಿಂದ ಗ್ರಾಮಸ್ಥರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಮುಂದಿನ ಭವಿಷ್ಯದ ದೃಷ್ಟಿಯಿಂದ ಮುಂದಾಲೋಚನೆ ಇಟ್ಟುಕೊಂಡು ಮುಂಜಾಗ್ರತವಾಗಿ ದೊಡ್ಡ ಪ್ರಮಾಣದಲ್ಲಿ ಸೇತುವೆ ನಿರ್ಮಿಸಿದರೆ ಇಂದು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಜಿಲ್ಲಾಡಳಿತ ಎಚ್ಚೆತುಕೊಂಡು ಮತ್ತೆ ಹೊಸದಾಗಿ ದೊಡ್ಡ ಮಟ್ಟದ ಸೇತುವೆ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಲು ಗ್ರಾಮಸ್ಥರ ಪರವಾಗಿ ಎಲ್ಲರೂ ಒಗ್ಗಟ್ಟಾಗಿ ಈ ಭಾಗದ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here