ಕಲಬುರಗಿ: ಚುನಾವಣೆಯಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿಆರ್‍ಓ)ಯ ಪಾತ್ರ ಬಹುಮುಖ್ಯವಾಗಿರುತ್ತದೆ. ಮತಗಟ್ಟೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನ ನಡೆಯುವಂತೆ ನೋಡಿಕೊಳ್ಳುವುದು ಪಿ.ಆರ್.ಓ. ಕರ್ತವ್ಯವಾಗಿದೆ ಎಂದು ರಾಷ್ಟ್ರೀಯಮಟ್ಟದ ಮಾಸ್ಟರ್ ಟ್ರೈನರ್ ಆದ ಕಲಬುರಗಿಯ ಸರಕಾರಿ ಮಹಿಳಾ ಪದವಿ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ. ಶಶಿಶೇಖರ ರೆಡ್ಡಿ ಅವರು ತಿಳಿಸಿದ್ದಾರೆ.
ಈಶಾನ್ಯ ಶಿಕ್ಷಕರ ಮತಕ್ಷೇತ್ರದಿಂದ ಚುನಾವಣೆ-2020 ಕುರಿತು ಪ್ರಿಸೈಡಿಂಗ್ ಅಧಿಕಾರಿಗಳು ಮತ್ತು ಪೋಲಿಂಗ್ ಅಧಿಕಾರಿಗಳಿಗೆ ಜಿಲ್ಲಾಡಳಿತ ವತಿಯಿಂದ ಗುರುವಾರದಂದು ಪಂಡಿತ ರಂಗಮಂದಿರದಲ್ಲಿ ಮೊದಲನೇಯ ಹಂತದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡುತಿದ್ದ ಅವರು, ಈ ಅಧಿಕಾರಿಗಳು ಶಿಸ್ತು ಮತ್ತು ಸಮಯಪಾಲನೆ ಕೂಡ ಮಾಡಬೇಕೆಂದು ಹೇಳಿದರು.
ಇತ್ತೀಚೆಗೆ ಚುನಾವಣೆ ಸಂಬಂಧ ಬದಲಾಗುತ್ತಿರುವ ಕಾನೂನು ವಿಧಾನಗಳನ್ನು ಬಗ್ಗೆ ತಿಳಿದುಕೊಳ್ಳಬೇಕು. ಚುನಾವಣೆಗೆ ಸಂಬಂಧಿಸಿದ ಎಲ್ಲಾ ಆದೇಶಗಳ ಪ್ರತಿಗಳನ್ನು ಹೊಂದಿರಬೇಕು. ಮಹಿಳೆಯರು, ಪುರುಷರು, ವಿಕಲಚೇತನರು, ವೃದ್ಧರು, ಗರ್ಭಿಣಿಯರು, ಅಸಹಾಯಕರು ಮುಂತಾದ ಮತದಾರರಿಗೆ ಮತದಾನಕ್ಕೆ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು ಎಂದರು.
ಪರಿಶೀಲನಾ ಪಟ್ಟಿಯ ಪ್ರಕಾರ ಚುನಾವಣಾ ಸಾಮಾಗ್ರಿಗಳು ಸರಿಯಾಗಿರುವದನ್ನು ಖಾತ್ರಿಪಡಿಸಿಕೊಳ್ಳಬೇಕು. ಚುನಾವಣೆ ಅಕ್ಟೋಬರ್ 28ನೇ ತಾರೀಖ ನಡೆಯುವ ಬೆಳಿಗ್ಗೆ 7 ಗಂಟೆಗೆ ತಮ್ಮ ತಮ್ಮ ಬೂತ್Àಗಳಲ್ಲಿ ಎಲ್ಲಾ ಸಿಬ್ಬಂದಿಗಳ ಜೊತೆಗೆ ಸರಿಯಾದ ಸಮಯಕ್ಕೆ ಹಾಜರಿರಬೇಕು ಎಂದು ಹೇಳಿದರು.
ಮತದಾನದ ದಿನದಂದು 7.30 ಘಂಟೆಗೆ ಪ್ರಕ್ರಿಯೆ ಪ್ರಾರಂಭಿಸಿ, ಹಾಜರಿರುವ ಏಜೆಂಟರಿಗೆ ಪರೀಕ್ಷಿಸಲು ಅವಕಾಶ ನೀಡಬೇಕು. ಈಶಾನ್ಯ ವಲಯದ ಶಿಕ್ಷಕರ ಚುನಾವಣೆ ಮುಂಜಾನೆ 8 ಗಂಟೆಯಿಂದ ಪ್ರಾರಂಭವಾಗಿ ಸಂಜೆ 5 ಗಂಟೆಯವರೆಗೆ ನಡೆಯುತ್ತದೆ. ಉಮೇದುವಾರ/ಏಜೆಂಟ್/ಪ್ರತಿನಿಧಿಗೆ ಮತದಾನದ ರಹಸ್ಯ ಕಾಪಾಡಲು ಎಚ್ಚರಿಕೆ ನೀಡಬೇಕು ಎಂದು ತಿಳಿಸಿದರು.
ಮತದಾನದ ಸಂದರ್ಭದಲ್ಲಿ ಕೋವಿಡ್-19 ತಡೆಗಟ್ಟುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ಕ್, ಸ್ಯಾನಿಟೈಸರ್ (ಜೆಲ್ ಅಥವಾ ಸ್ಪ್ರೇ), ಥರ್ಮಲ್ ಗನ್, ಸಾಮಾಜಿಕ ಅಂತರ ಕಾಪಾಡುವುದು, ಚಳಿ, ಜ್ವರ ಕೆಮ್ಮು ಉಸಿರಾಟದ ತೊಂದರೆ ಇದ್ದರೆ ಸೂಕ್ತ ಕ್ರಮ ವಹಿಸುವುದು. ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಳ್ಳುವುದು. ಮತಗಟ್ಟೆಯನ್ನು ಸ್ಯಾನಿಟೈಜೇಶನ್ ಮಾಡುವುದು ಮುಂತಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ಒಬ್ಬ ಮತಗಟ್ಟ್ಟೆಯ ಅಧಿಕಾರಿ ಎದುರಲ್ಲಿ ಒಬ್ಬ ಮತದಾರ ಮಾತ್ರ ಇರಬೇಕು. ಮತದಾರರ ದಟ್ಟಣೆ ಹೆಚ್ಚಿದ್ದರೆ ಟೋಕನ್ ನೀಡಬೇಕು. ಮತಗಟ್ಟೆಯ ಹೊರಗೆ ಮತದಾರರು ಸಾಮಾಜಿಕ ಅಂತರದಿಂದರಬೇಕು ಎಂದು ಸಲಹೆ ನೀಡಿದರು.