ವಾಡಿ: ಕೋವಿಡ್-೧೯ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ವಾಡಿ ಪಟ್ಟಣದಲ್ಲಿ ಈಬಾರಿ ಸರಳ ದಸರಾ ಉತ್ಸವ ಆಚರಣೆಗೆ ಚಾಲನೆ ನೀಡಲಾಯಿತು.
ನಗರದ ರೈಲ್ವೆ ಕಾಲೋನಿ ಹನುಮಾನ ದೇವಸ್ಥಾನ ಪರಿಸರದಲ್ಲಿ ಪ್ರತಿಷ್ಟಾಪಿಸಲಾಗುವ ದೇವಿ ಮೂರ್ತಿ ಉತ್ಸವಕ್ಕೆ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಬಿ.ಜಿ.ಪಾಟೀಲ ಅವರು ಶನಿವಾರ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಚಾಲನೆ ನೀಡಿದರು. ಬಿರ್ಲಾ ಏರಿಯಾದಿಂದ ಹೊರಡುವ ದೇವಿ ಮೆರವಣಿಗೆ ಕೈಬಿಟ್ಟು ಪೂಜೆ ನೆರವೇರಿಸುವ ಮೂಲಕ ದೇವಿ ಪ್ರತಿಮೆಯನ್ನು ಉತ್ಸವದ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು.
ದಸರಾ ಉತ್ಸವದ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಬಸವರಾಜ ಪಂಚಾಳ, ದಸರಾ ನಮ್ಮೆಲ್ಲರ ಹೆಮ್ಮೆಯ ನಾಡ ಹಬ್ಬವಾಗಿದೆ. ರಕ್ಕಸರನ್ನು ಕೊಂದು ಪಾಪಲೋಕವನ್ನು ಧ್ವಂಸಗೊಳಿಸಿದ ತಾಯಿ ಚಾಮುಂಡಿಯನ್ನು ಆರಾಧಿಸುವ ಈ ಹಬ್ಬವನ್ನು ನಾವೆಲ್ಲ ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು. ಕೊರೊನಾ ಎಂಬ ಮಹಾಮಾರಿ ನಮ್ಮ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದು, ಪರಿಣಾಮ ಜನಸಂದಣಿಗೆ ಅವಕಾಶ ನೀಡದಂತೆ ದೇವಿಯನ್ನು ಪೂಜಿಸೋಣ. ಮನೆ ಮನೆಗಳಲ್ಲಿ ದಸರಾ ಹಬ್ಬದ ಸಡಗರವಿರಲಿ. ಕಳೆದ ೧೫ ವರ್ಷಗಳಿಂದ ದಸರಾ ಉತ್ಸವಕ್ಕೆ ಮೆರಗು ತಂದುಕೊಡುತ್ತಿದ್ದ ಎತ್ತರದ ರಾವಣ ಪ್ರತಿಕೃತಿ ದಹನ ಈ ವರ್ಷ ಕೈಬಿಡಲಾಗಿದೆ. ಸಾಂಪ್ರದಾಯಿಕ ದಸರಾ ಕೇವಲ ದೇವಿಯ ಪೂಜೆಗೆ ಸೀಮಿತಗೊಳ್ಳಲಿದೆ ಎಂದು ತಿಳಿಸಿದರು.
ಮಾಜಿ ಶಾಸಕ ವಾಲ್ಮೀಕಿ ನಾಯಕ, ಪುರಸಭೆ ಉಪಾಧ್ಯಕ್ಷ ತಿಮ್ಮಯ್ಯ ಪವಾರ, ಸಿಪಿಐ ಕೃಷ್ಣಪ್ಪ ಕಲ್ಲದೇವರು, ಜೈ ಭವಾನಿ ತರುಣ ಮಂಡಲದ ಅಧ್ಯಕ್ಷ ಮಹಾರಾಜ ಶೇಳಕೆ, ಬಸವರಾಜ ಕೋಳಿ, ಪುರಸಭೆ ಸದಸ್ಯ ಭೀಮಶಾ ಜಿರೊಳ್ಳಿ, ಕಾಂಗ್ರೆಸ್ ಮುಖಂಡರಾದ ಚಂದ್ರಸೇನ ಮೇನಗಾರ, ಬಾಬುಮಿಯ್ಯಾ, ಮಲ್ಲೇಶಪ್ಪ ಚುಕ್ಕೇರ, ಸೂರ್ಯಕಾಂತ ರದ್ದೇವಾಡಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ಕೊರಮ ಸಮಾಜದ ಅಧ್ಯಕ್ಷ ಜಗದೀಶ ಜಾಧವ, ಮುಖಂಡರಾದ ಚಂದ್ರಶೇಖರರೆಡ್ಡಿ ನಾಲವಾರ, ಹರಿ ಗಲಾಂಡೆ, ರಾಜು ಮುಕ್ಕಣ್ಣ, ಲಕ್ಷ್ಮಣ ಕದಮ್, ವಿಜಯ ಪವಾರ, ಗಣೇಶ ಪವಾರ, ಕಿಶನ ಜಾಧವ, ಸುನೀಲ ಕಾಂಬಳೆ, ವಿಜಯ ಗಣಪತ, ಅಜಯ ಸುಳೆ, ಗಿರಿಮಲ್ಲಪ್ಪ ಕಟ್ಟಿಮನಿ, ಸುರೇಶ ಬಣಗಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.