ಆಳಂದ: ಕಳೆದ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಹಾಗೂ ಅಮರ್ಜಾ ನದಿಯ ನೀರು ಅಪಾರ ಪ್ರಮಾಣದಲ್ಲಿ ಬಿಟ್ಟಿರುವುದರಿಂದ ಆಳಂದ ತಾಲೂಕಿನ ಹಿತ್ತಲಸಿರೂರ ಗ್ರಾಮವು ಮುಳುಗಡೆ ಹಂತದಲ್ಲಿದ್ದು ಹಿತ್ತಲಸಿರೂರ ಗ್ರಾಮದ ಜನರು ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಮರ್ಜಾ ನದಿಯ ದಂಡಕ್ಕೆ ಅಂಟಿಕೊಂಡಿರುವುದರಿಂದ ಈ ಗ್ರಾಮದ ಜನರು ಇದೀಗ ಭಯದ ಭೀತಿಯಲ್ಲಿ ಕಾಲ ಕಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಮರ್ಜಾ ನದಿಯ ನಾಲ್ಕು ಗೇಟ್ ಗಳು ತೆರೆದಿರುವುದರಿಂದ ನೀರಿನ ರಭಸಕ್ಕೆ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಸಾಲ ಮಾಡಿ ಬೆಳೆ ಬೆಳೆದ ತನ್ನ ಕಣ್ಣೇದುರಲ್ಲಿಯೇ ಹಾಳಾಗುತ್ತಿರೋದ್ರಿಂದ ರೈತರು ಕಣ್ಣೀರು ಹಾಕುತ್ತಿದ್ದಾರೆ. ನದಿ ಸುತ್ತಮುತ್ತಲಿನ ಗ್ರಾಮದ ಜನರು ಪ್ರವಾಹದಿಂದಾಗಿ ಜೀವ ಕೈಯಲ್ಲಿ ಹಿಡಿಕೊಂಡು ಬದುಕು ಸಾಗಿಸುವಂತಾಗಿದೆ.
ಹಿತ್ತಲಸಿರೂರ ಗ್ರಾಮಕ್ಕೆ ಕುಡಿಯುವ ನೀರು ನದಿಯ ತಟದಲ್ಲಿರುವ ಕೊಳೆವೆ ಭಾವಿಯಿಂದ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಮಳೆಯಿಂದ ಕುಡಿಯುವ ನೀರಿಗೂ ಜನರು ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇಯಿದಾಗಿದ್ದು, ಸೇತುವೆ ಕೂಡ ಬಿರುಕು ಬಿಟ್ಟಿದ್ದರಿಂದ ಹಿತ್ತಸಿರೂರ ಗ್ರಾಮದ ಜನರಲ್ಲಿ ಆತಂಕದ ಕಾರ್ಮೋಡ ಆವರಿಸಿದೆ.