ಕಲಬುರಗಿ: ಆರೋಗ್ಯವೇ ದೊಡ್ಡ ಉಡುಗೊರೆ, ನೆಮ್ಮದಿಯೇ ಮಹಾ ಸಂಪತ್ತು, ನಂಬಿಕೆಯೇ ನಿಜವಾದ ಸಂಬಂಧ ಇದನ್ನೆಲ್ಲಾ ಬೆಳೆಸುವುದರೊಂದಿಗೆ ನಾವೆಲ್ಲರೂ ಕೂಡಿ ಆರೋಗ್ಯವಂತ ಸಮಾಜ ನಿರ್ಮಿಸೊಣ ಎಂದು ಕೆ.ಎಚ್.ಬಿ ಗ್ರೀನ್ ಪಾರ್ಕ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ನೂತನ ಅದ್ಯಕ್ಷರಾದ ಸಂಜೀವಕುಮಾರ ಶೆಟ್ಟಿ ಹೇಳಿದರು.
ಇಂದು ನಗರದ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ಸಂಘದ ಕಾರ್ಯಾಲಯ ಉದ್ಘಾಟನಾ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡುತ್ತಾ ದೇಶ ನಮಗಾಗಿ ಏನು ಮಾಡಿದೆ ಎನ್ನುವುದಕ್ಕಿಂತ, ದೇಶಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬುವುದು ಬಹಳ ಮುಖ್ಯ.
ಈ ಸಂಘವು ಕೇವಲ ಬಡಾವಣೆಯ ಕಾರ್ಯಕ್ಕೆ ಸೀಮಿತವಾಗದೆ, ನಗರ ಹಾಗೂ ಹಳ್ಳಿಗಳಲ್ಲಿಯೂ ಕೂಡ ಸಮಾಜ ಸೇವೆಯಂತ ಕೆಲಸ ಮಾಡಲು ನಮ್ಮ ಕ್ರಿಯಾಶೀಲ ತಂಡ ಸಿದ್ಧವಾಗಿದೆ. ಶರಣರು ಕಟ್ಟಿದ ನಾಡು ನಮ್ಮ ಬಡಾವಣೆಯಿಂದಲೇ ಶರಣರ ಆಚಾರ ವಿಚಾರಗಳೊಂದಿಗೆ ಉತ್ತಮ ಕಾರ್ಯ ಪ್ರಾರಂಭಿಸಿದ್ದೆವೆ. ತಮ್ಮೆಲ್ಲರ ಸಲಹೆ ಸೂಚನೆ ಮಾರ್ಗದರ್ಶನ ಮಾಡುವುದರೊಂದಿಗೆ ಒಳ್ಳೆಯ ಸಮಾಜ ಕಟ್ಟೋಣ ಎಂದು ಮಾರ್ಮಿಕವಾಗಿ ನುಡಿದರು.
ನ್ಯಾಯವಾದಿ ಹಾಗೂ ಸಂಘದ ಕಾನೂನು ಸಲಹೆಗಾರರು ಹಣಮಂತರಾಯ ಅಟ್ಟೂರ ಸ್ವಾಗತ ಗೀತೆ ಹಾಡಿದರು. ವೇದಿಕೆಯ ಮೇಲೆ ನಾಗೆಂದ್ರಪ್ಪ ದಂಡೋತಿಕರ, ಸಂಗಮೇಶ ಸರಡಗಿ, ಕೆ.ಎಮ್ ಲೊಕಯ್ಯ, ರಾಜೇಶ ನಾಗಬುಜಂಗೆ, ಶ್ರೀನಿವಾಸ ಬುಜ್ಜಿ, ಡಿ.ವಿ ಕುಲಕರ್ಣಿ, ಸಂತೋಷ ಹೂಗಾರ, ರೇವಣಸಿದ್ದಪ್ಪ ರುದ್ರವಾಡಿ, ಶರಣಬಸಪ್ಪ ದೇಶಟ್ಟಿ,ಗೌಸ್ ಅಸ್ಮತ ಅಲಿ ಖಾನ್, ಮಂಜುನಾಥ ಬೆಳಮಗಿ, ಬಸವರಾಜ ಹೆಳವರ ಯಾಳಗಿ ಹಾಗೂ ಬಡಾವಣೆಯ ನಿವಾಸಿಗಳು ಭಾಗವಹಿಸಿದ್ದರು.
ಶಿವಕಾಂತ ಚಿಮ್ಮಾ ಸ್ವಾಗತಿಸಿದರು, ವಿರೇಶ ಬೋಳಶೆಟ್ಟಿ ನರೋಣಾ ನಿರೂಪಿಸಿದರು, ಚಂದ್ರಕಾಂತ ತಳವಾರ ವಂದಿಸಿದರು.