ಕಲಬುರಗಿ: ಪ್ರವಾಹ ಪೀಡಿತ ಪ್ರದೇಶಚಿತ್ತಾಪುರ ತಾಲ್ಲೂಕಿನ ಮುತ್ತಗಾ ಗ್ರಾಮದಲ್ಲಿ ಸಂಸದ ಡಾ. ಉಮೇಶ್ ಜಾಧವ್ ಅವರು ಇಂದು ಭೇಟಿ ನೀಡಿದ ವೇಳೆ ಗ್ರಾಮಸ್ಥರು ಸಂಸದರಿಗೆ ವಾಪಸ್ ಜಾವ್ ಎಂದು ಘೋಷಣೆ ಕೂಗುವ ಮೂಲಕ ವಾಪಸ್ ಕಳಿಸಿರುವ ಘಟನೆ ನಡೆದಿದೆ.
ಇಂದು ಇಲ್ಲಿನ ಮುತ್ತಗಾ ಗ್ರಾಮಕ್ಕೆ ಭೇಟಿ ನೀಡಿದ ವೇಳೆಯಲ್ಲಿ ಗ್ರಾಮಸ್ಥರು ಸಂಸದರ ವಾಹನಕ್ಕೆ ಅಡ್ಡಗಟ್ಟಿ ವಾಹನಕ್ಕೆ ಮುಂದೆ ಬಿಡದೆ ವಾಪಸ್ ಜಾವ್ ಎಂದು ಘೋಷಣೆಗೆ ಕೂಗಿದ್ದರು. ವಾಡ ತಾಂಡದ ರಸ್ತೆ ಕಾಮಗಾರಿ ಅರ್ಥಕ್ಕೆ ನಿಂತು ವರ್ಷಗಳು ಕಳೆದಿದ್ದು ರಸ್ತೆ ಪೂರ್ಣಗೊಂಡಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು ಎನ್ನಲಾಗಿದೆ.
ಈ ವೇಳೆಯಲ್ಲಿ ಸಂಸದ ಬೆಂಗಾವಲು ಪಡೆ ಮತ್ತು ಸಂಸದರು ಪ್ರವಾಹ ಪೀಡಿತರಿಗೆ ನೆರವು ನೀಡಲು ಬಂದಿದ್ದು, ಸ್ಥಳದಲ್ಲೇ ಸಮಸ್ಯೆ ಪರಿಹಾರ ನೀಡುವುದಾಗಿ ಭರವಸೆ ನೀಡುವುದುದಾಗಿ ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು, ಪ್ರಯತ್ನ ವಿಫಲದ ನಂತರ ಸಂಸದರು ವಾಪ್ ಮರಳಿದರು ಎಂದು ತಿಳಿದುಬಂದಿದೆ.
ಈ ವೇಳೆ ಗ್ರಾಮದಲ್ಲಿ ಕೆಲವಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಸಂಸದ ಮರಳಿತ ನಂತರ ಸನ್ನಿವೇಶ ಸಾಮನ್ಯಸ್ಥಿತಿಗೆ ತಲುಪಿತು ಎನ್ನಲಾಗಿದೆ.
ಜಿಲ್ಲಾದ್ಯಂತ ಪ್ರವಾಹಕ್ಕೆ ಸಿಲುಕಿದ್ದು, ಸಂಸದರು ಕೇವಲ ಚಿಂಚೋಳಿ ಮೇಲೆ ಮಾತ್ರ ತೊರಿಸುತ್ತಿದ್ದಾರೆ ಎಂದು ಚಿತ್ತಾಪುರ ಕ್ಷೇತ್ರದ ಶಾಸಕರಾದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರೋಪಿಸಿದರು. ಅಲ್ಲದೇ ಇತ್ತೀಚಿಗೆ ತಮ್ಮ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರಾಜ್ಯ ಸರಕಾರ ಮತ್ತು ಸಂಸದ ವಿರುದ್ಧ ಅಸಮಧಾನ ಕೂಡ ವ್ಯಕ್ತಪಡಿಸಿದರು.