ಸುರಪುರ: ತಾಲೂಕಿನ ಬಾಚಿಮಟ್ಟಿ ಗ್ರಾಮದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರರ ಜೀವನಾಧಾರಿತ ಕತೆಯಾದ ಮಹಾನಾಯಕ ಧಾರಾವಾಹಿಯ ಬ್ಯಾನರ್ ಅನಾವರಣ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಪ್ರತಿಯೊಂದು ಗ್ರಾಮದಲ್ಲಿ ಮಹಾನಾಯಕ ಧಾರಾವಾಹಿಯನ್ನು ಬೆಂಬಲಿಸಿ ಬ್ಯಾನರ್ ಉದ್ಘಾಟನೆ ಕಾರ್ಯಕ್ರಮ ನಡೆಸುವ ಮೂಲಕ ನಾವೆಲ್ಲರು ಡಾ: ಬಾಬಾ ಸಾಹೇಬ್ ಅಂಬೇಡ್ಕರರನ್ನು ಸ್ಮರಿಸುವ ಕಾರ್ಯ ನಡೆಯಬೇಕಿದೆ.ಅಂಬೇಡ್ಕರರ ಜೀವನ ಮತ್ತು ಸಾಧನೆಯನ್ನು ತಿಳಿಯದೆ ಅಂಬೇಡ್ಕರರು ಅರ್ಥವಾಗಲಾರದು ಅಲ್ಲದೆ ಅಂಬೇಡ್ಕರರ ಅನುಯಾಯಿಗಳಾದವರು ಅಂಬೇಡ್ಕರರನ್ನು ಅರಿಯುವ ಅವಶ್ಯಕತೆ ತುಂಬಾ ಇದೆ,ಇದನ್ನು ಅರಿತು ಝೀ ಕನ್ನಡ ವಾಹಿನಿ ಹಾಗು ರಾಘವೇಂದ್ರ ಹುಣಸೂರವರು ಮಹಾನಾಯಕ ಧಾರಾವಾಹಿ ಮೂಲಕ ನಮಗೆಲ್ಲರಿಗು ಸಂವಿಧಾನ ಶಿಲ್ಪಿಯನ್ನು ತೋರಿಸುತ್ತಿದ್ದಾರೆ,ಅದಕ್ಕಾಗಿ ವಾಹಿನಿಗೆ ನಾವೆಲ್ಲರು ಧನ್ಯವಾದ ಅರ್ಪಿಸಲೆಬೇಕು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಡಾ: ಬಾಬಾ ಸಾಹೇಬ್ ಅಂಬೇಡ್ಕರರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಲಾಯಿತು.ನಂತರ ಮಹಾನಾಯಕ ಬ್ಯಾನರ್ ಅನಾವರಣಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ ಕಚಕನೂರ ಗ್ರಾ.ಪಂ ಮಾಜಿ ಅಧ್ಯಕ್ಷ ಬಸವರಾಜ್ ಕರಿಹಳ್ಳಿ ಶಿವಲಿಂಗ ಹಸನಾಪುರ ವೀರಭದ್ರಪ್ಪ ತಳವಾರಗೇರಾ ವೆಂಕಟೇಶ ದೇವಾಪುರ ಶಿವರಾಜ ಕಲಿಕೇರಿ ಬಸಪ್ಪ ಕಕ್ಕೇರಿ ನಂದಪ್ಪ ಬಡಿಗೇರ ಮುದ್ದೆಪ್ಪ ಬಿಲ್‌ಕಲೆಕ್ಟರ್ ಬುದ್ಧಿವಂತ ನಾಗರಾಳ ಆಕಾಶ ಕಟ್ಟಿಮನಿ ಮಲ್ಲು ಮುಷ್ಠಳ್ಳಿ ಮರಿಲಿಂಗ ಬೇಟೆಗಾರ ಮಲ್ಲು ಚಲುವಾದಿ ಕುಂಬಾರಪೇಟೆ ಜೈಭೀಮ್ ದೇವರಮನಿ ಖಾಜಾ ಕೆ.ಎಮ್ .ಪಟೇಲ್ ಖಾಜಾ ಅಜ್ಮೀರ್ ಸೇರಿದಂತೆ ಅನೇಕರಿದ್ದರು.ಮಲ್ಲು ಕೆಸಿಪಿ ನಿರೂಪಿಸಿದರು ರಮೇಶ ಬಡಿಗೇರ ವಂದಿಸಿದರು.