ಸುರಪುರ: ಕನ್ನಡ ಸಾಹಿತ್ಯ ಸಂಘ ಸುರಪುರ ಹಾಗು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದ ಗರುಡಾದ್ರಿ ಕಲಾ ಮಂದಿರಲ್ಲಿ ನಾಡಹಬ್ಬದ ಅಂಗವಾಗಿ ನಾಡದೇವಿಯ ಘಟಸ್ಥಾಪನೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕನ್ನಡ ಸಾಹಿತ್ಯ ಸಂಘದ ಮುಖಂಡ ಬಸವರಾಜ ಜಮದ್ರಖಾನಿ ಮಾತನಾಡಿ,ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯ ಸಂಘದಿಂದ ಅದ್ಧೂರಿಯಾಗಿ ನಾಡಹಬ್ಬವನ್ನು ಆಚರಿಸಲಾಗುತ್ತಿತ್ತು,ಆದರೆ ಈ ವರ್ಷ ನಮ್ಮ ಸಂಘದ ಅಧ್ಯಕ್ಷರಾಗಿದ್ದ ರಾಜಾ ಮದನಗೋಪಾಲ ನಾಯಕರಿಲ್ಲದೆ ನಾಡಹಬ್ಬ ಆಚರಣೆ ಅಪೂರ್ಣ ಎನಿಸುತ್ತಿದೆ ಎಂದರು.
ಈ ವರ್ಷ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕರಿಲ್ಲ ಹಾಗು ಕೊರೊನಾ ಎಂಬ ಮಹಾ ಮಾರಿ ಇಡೀ ದೇಶವನ್ನು ನಲುಗಿಸಿರುವುದರಿಂದ ನಾಡ ಹಬ್ಬದ ಯಾವುದೇ ಕಾರ್ಯಕ್ರಮವನ್ನು ಆಚರಿಸುತ್ತಿಲ್ಲ,ಆದರೆ ಸಾಂಪ್ರಾದಾಯಿಕವಾಗಿ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವುದರಿಂದ ಸರಳವಾಗಿ ನಾಡದೇವಿಯ ಘಟಸ್ಥಾಪನೆ ಮಾಡಿ ನಾಡ ಹಬ್ಬ ಮುಗಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ನಾಡದೇವಿಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ನಮಿಸಲಾಯಿತು.ಆದರೆ ಎಲ್ಲರ ಮನದಲ್ಲಿನ ಅಗಲಿದ ರಾಜಾ ಮದನಗೋಪಾಲ ನಾಯಕ ಅವರ ನೆನಪಿನ ನೋವು ಎದ್ದು ಕಾಣುತ್ತಿತ್ತು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಹಾಗು ಮುಖಂಡರಾದ ರಾಘವೇಂದ್ರ ಬಾಡಿಹಾಳ ರಾಜಶೇಖರ ದೇಸಾಯಿ ಶಿವಕುಮಾರ ಮಸ್ಕಿ ದೇವು ಹೆಬ್ಬಾಳ ರಾಘವೇಂದ್ರ ಭಕ್ರಿ ಹಣಮಂತ್ರಾಯ ದೊರೆ ಸೇರಿದಂತೆ ರಾಣಿ ಜಾನಕಿದೇವಿ ಶಾಲೆಯ ಶಿಕ್ಷಕರಿದ್ದರು.