ಕಲಬುರಗಿ: ವಿಜಯದಶಮಿ ನೆಪದಲ್ಲಿ ಇದೇ 25ರಂದು ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಪ್ರಾಣಿಬಲಿಯನ್ನು ತಡೆಗಟ್ಟಬೇಕು ಹಾಗೂ ಪ್ರಾಣಿಬಲಿ ಮಾಡದಂತೆ ಇಲಾಖೆಗಳಿಗೆ ನಿರ್ದೇಶನ ನೀಡಬೇಕೆಂದು ತಾಲ್ಲೂಕ ದಲಿತ ಸಂಘಟನೆಗಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಲಿತ ಸಮನ್ವಯ ಸಮಿತಿ ಮುಖಂಡರುˌ ಪ್ರತಿ ವರ್ಷ ವಿಜಯದಶಮಿಯಂದು ಪೊಲೀಸ್ ಇಲಾಖೆˌ ವಿದ್ಶುತ್ ಸರಭರಾಜು ಮಂಡಳಿˌ ಸಾರಿಗೆ ಇಲಾಖೆ ಸೇರಿದಂತೆ ಹಲವು ಕಚೇರಿಗಳಲ್ಲಿ ಪ್ರಾಣಿಬಲಿ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಸರಕಾರಿ ಅಧಿಕಾರಿಗಳು ಕಚೇರಿಯಲ್ಲಿ ಕಂದಾಚಾರದ ಆಚರಣೆ ಮಾಡುತ್ತಿರುವುದು ಸಮಿತಿ ಖಂಡಿಸುತ್ತದೆ ಎಂದರು.
ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಜಿಲ್ಲೆಯ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಪ್ರಾಣಿಬಲಿ ಮಾಡದಂತೆ ನಿರ್ದೇಶಿಸಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಮಲ್ಲಣ್ಣ ಕೊಡಚಿˌ ಭೀಮರಾಯ ನಗನೂರˌ ದವಲಪ್ಪ ಮದನˌ ಭಾಗಣ್ಣ ಸಿದ್ನಾಳˌ ಸಿದ್ರಾಮ ಕಟ್ಟಿˌ ಶ್ರೀಹರಿ ಕರಕಿಹಳ್ಳಿˌ ರವಿ ಕುಳಗೇರಿ ಸೇರಿದಂತೆ ಅನೇಕರು ಇದ್ದರು.