ಪ್ರವಾಹ ನಿಂತ ಮೇಲೆ ಹೊನಗುಂಟಾದಲ್ಲಿ ರೋಗದ ಭೀತಿ

0
201

ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮದ ಸಿಬ್ಬರಕಟ್ಟಾ ಪ್ರದೇಶದಲ್ಲಿ ಗಬ್ಬು ವಾಸನೆ ಹರಡುತ್ತಿದೆ.ಕೆಸರು ತುಂಬಿಕೊಂಡು ಜನರಿಗೆ ಓಡಾಡಲು ಆಗದ ಸ್ಥಿತಿ ಉಂಟಾಗಿದೆ.ಇದರಿಂದ ಇಲ್ಲಿನ ಜನರಿಗೆ ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದ್ದು, ಕೂಡಲೇ ಗ್ರಾಪಂ ಅಧಿಕಾರಿಗಳು ಇದನ್ನು ಸ್ವಚ್ಛಗೊಳಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಂಚಾಲಕ ರಾಯಪ್ಪ ಹುರಮುಂಜಿ ಆಗ್ರಹಿಸಿದ್ದಾರೆ.

ಈಗಾಗಲೇ ಹೊನಗುಂಟಾ ಗ್ರಾಮಸ್ಥರು ಭೀಮಾ ಹಾಗೂ ಕಾಗಿಣಾ ನದಿಯ ಪ್ರವಾಹದಿಂದ ತ್ತರಿಸಿ ಹೋಗಿದ್ದಾರೆ. ಪ್ರವಾಹ ಉಂಟಾದಾಗ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಆಹಾರ ಪದಾರ್ಥ, ಸಾಮಾನುಗಳು ನಾಶವಾಗಿ ಬದುಕು ಬೀದಿಗೆ ಬಂದಂತಾಗಿದೆ. ಪ್ರವಾಹದಿಂದ ಒಂದು ತೊಂದರೆ ಅನುಭವಿಸಿದರೇ, ಪ್ರವಾಹ ನಿಂತ ಮೇಲೆ ಕಸಕಡ್ಡಿ, ಕಂಟಿಗಳು, ಕೆಸರಿನ ರಸ್ತೆ, ಗಬ್ಬೆದ್ದು ನಾರುವ ವಾತಾವರಣದಿಂದ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಅಲ್ಲದೇ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಇದೆ.

Contact Your\'s Advertisement; 9902492681

ಈ ಬಗ್ಗೆ ಈಗಾಗಲೇ ಗ್ರಾಪಂ ಅಧಿಕಾರಿಗಳು ಗಮನಹರಿಸಿ ಸ್ವಚ್ಛಗೊಳಿಸಬೇಕಾಗಿತ್ತು.ಆದರೆ ಇಲ್ಲಿಯವರೆಗೆ ಗ್ರಾಪಂ, ತಾಪಂ ಹಾಗೂ ತಾಲೂಕಾಢಳಿತದ ಅಧಿಕಾರಿಗಳು ಕ್ರಮಕೈಗೊಂಡಿಲ್ಲ.ಆದ್ದರಿಂದ ಕೂಡಲೇ ಸಂಬಂಧ ಪಟ್ಟ  ಅಧಿಕಾರಿಗಳು ಸ್ವಚ್ಚಗೊಳಿಸಿ ಗ್ರಾಮಸ್ಥರಿಗೆ ರೋಗ ಹರಟದಂತೆ ಮುನೇಚ್ಚರಿಕ್ಜೆ ಕ್ರಮ ಕೈಗೊಳ್ಳಬೇಕಾಗಿ  ರಾಯಪ್ಪಾ ಹುರಮುಂಜಿ,ಗ್ರಾಮಸ್ಥರಾದ ಚಂದ್ರಮಾ ಹಲರ್ಕಟಿ, ನಿಂಗಪ್ಪಾ ಬನ್ನೆಪನೋರ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here