ಶಹಾಬಾದ:ರಾಜ್ಯದಲ್ಲಿ ಬಿಜೆಪಿ ಸರಕಾರವಿರುವುದರಿಂದ ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಿದರೇ ಶಿಕ್ಷಕರ ಹೆಚ್ಚಿನ ಸಮಸ್ಯೆಗಳು ಬಗೆಹರಿಯಲಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಹೇಳಿದರು.
ಅವರು ಶುಕ್ರವಾರ ಈಶಾನ್ಯ ಶಿಕ್ಷಕರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ನಿಮಿತ್ತ ನಗರದ ರಾಷ್ಟ್ರಭಾಷಾ ಶಿಕ್ಷಣ ಸಮಿತಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ನಮೋಶಿ ಅವರಿಗೆ ಮತಯಾಚಿಸುವಂತೆ ಕೋರಿ ಮಾತನಾಡಿದರು.
ಈ ಹಿಂದಿನ ಸರಕಾರ ಸರಕಾರಿ ನೌಕರರಿಗೆ ಸಿಗಬೇಕಾದ ಸವಲತ್ತುಗಳು ನೀಡಲು ಹಿಂದೇಟು ಹಾಕಿದೆ.ಆದರೆ ಮುಖ್ಯಮಂತ್ರಿ ಯಡಿಯೂರಪ್ಪನವರು ಶಿಕ್ಷಕರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಯಥಾವತ್ತಾಗಿ ನೀಡಿದ್ದಾರೆ.ಯಾವ ಸರಕಾರ ನೀಡದ ಸೌಲಭ್ಯಗಳು ಹಾಗೂ ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಬಿಜೆಪಿ ಸಕರ್ಾರದಿಂದ ಆಗಿದೆ.ಅಲ್ಲದೇ ಶಿಕ್ಷಕರಿಗೆ ಪಿಂಚಣಿ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ, ಯಡಿಯೂರಪ್ಪನವರಿಗೆ ತಿಳಿಸುವ ಮೂಲಕ ಶಿಕ್ಷಕರ ಪಿಂಚಣಿ ಯೋಜನೆ ಜಾರಿಯಾಗುವಂತೆ ಕ್ರಮಕೈಗೊಳ್ಳಲು ಒತ್ತಾಯಿಸುತ್ತೆವೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ ಮಾತನಾಡಿ, ಶಶೀಲ ನಮೋಶಿ ಅವರು ಎಲ್ಲರಿಗೂ ಸಿಗುವಂಥ ವ್ಯಕ್ತಿ.ಅಲ್ಲದೇ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿತವರು. ಏನೋ ಈ ಹಿಂದೆ ತಪ್ಪುಗಳು ಆಗಿವೆ.ಅವುಗಳನ್ನು ಬದಿಗಿಟ್ಟು, ಈ ಬಾರಿ ನಮೋಶಿ ಪರ ಮತಚಲಾಯಿಸುವಂತೆ ಮನವಿ ಮಾಡಿದರು.
ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಕನಕಪ್ಪ ದಂಡಗುಲಕರ್, ಜಿಲ್ಲಾ ಮಹಿಳಾ ಮೋಚರ್ಾ ಅಧ್ಯಕ್ಷೆ ಭಾಗಿರಥಿ ಗುನ್ನಾಪೂರ, ಜಯಶ್ರೀ ಸೂಡಿ, ಅನೀಲ ಭೋರಗಾಂವಕರ್, ನಿಂಗಣ್ಣ ಹುಳಗೋಳಕರ್, ಸದಾನಂದ ಕುಂಬಾರ,ಅಣ್ಣಪ್ಪ ದಸ್ತಾಪೂರ, ಅರುಣ ಪಟ್ಟಣಕರ್, ಮಹಾದೇವ ಗೊಬ್ಬೂರಕರ್,ಸಿದ್ರಾಮ ಕುಸಾಳೆ,ಬಸವರಾಜ ಬಿರಾದಾರ, ಸಂಜಯ ಸೂಡಿ,ಗೋಪಾಲ ರಾಠೋಡ, ಭರತ ಮುತ್ತಗಾ ಸೇರಿದಂತೆ ಅನೇಕರು ಹಾಜರಿದ್ದರು.