ಸುರಪುರ: ನಗರದ ರಂಗಂಪೇಟೆಯ ಈಶ್ವರ ಬನಶಂಕರಿ ದೇವಸ್ಥಾನದಲ್ಲಿ ಶನಿವಾರದಂದು ನವರಾತ್ರಿ ಆಯುಧ ಪೂಜೆಯನ್ನು ಕೊರೋನಾ ಪ್ರಯುಕ್ತ ಸಂಕ್ಷಿಪ್ತವಾಗಿ ಆಚರಿಸಲಾಯಿತು.
ಆಯುಧ ಪೂಜೆ ನಿಮಿತ್ತ ಗಂಗಾಸ್ನಾನ, ಶ್ರೀ ಈಶ್ವರ ಹಾಗೂ ಶ್ರೀ ಬನಶಂಕರಿ ದೇವಿಗೆ ಅಲಂಕಾರ,ಪೂಜೆ, ನೈವೇದ್ಯ ಕಾರ್ಯಕ್ರಮಗಳು ಜರುಗಿದವು ನಂತರ ೧೧ಜನ ಮುತ್ತೈದೆಯರು ಮತ್ತು ೧೧ಜನ ಬಾಲ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸೇರಿದಂತೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು, ದೇವಸ್ಥಾನದ ಅರ್ಚಕರಾದ ಮಂಜುನಾಥ ಸ್ವಾಮಿ ದೇವಾಂಗಮಠ ನೇತೃತ್ವದಲ್ಲಿ ಎಲ್ಲಾ ಪೂಜಾ ಕೈಂಕರ್ಯಗಳು ಜರುಗಿದವು.
ಈ ಬಾರಿ ಕೊರೋನಾ ಪ್ರಯುಕ್ತ ಪ್ರತಿ ವರ್ಷ ಏರ್ಪಡಿಸುತ್ತಿದ್ದ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ರದ್ದುಪಡಿಸಿದ್ದು ಸಂಕ್ಷಿಪ್ತವಾಗಿ ಆಚರಿಸಲಾಗುತ್ತಿದೆ ಎಂದು ದೇವಸ್ಥಾನ ಕಮೀಟಿಯ ನಿಂಗಪ್ಪ ರಾಯಚೂರಕರ ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಬಸವರಾಜ ಚೆಟ್ಟಿ,ಗಿರಿಮಲ್ಲಪ್ಪ ಕೊಳ್ಳಿಗೌಡ,ಶರಣಪ್ಪ ಗುಮ್ಮಾ, ಸಂಗಪ್ಪ ಚೆಟ್ಟಿ,ವಿಶ್ವನಾಥ ಸಪ್ಪಂಡಿ,ಮಲಕಾಜಪ್ಪ ಮಿಟ್ಟಾ,ಮಲಕಾಜಪ್ಪ ಸಪ್ಪಂಡಿ ಹಾಗೂ ಇತರರಿದ್ದರು.