ಸುರಪುರ: ಕೊರೊನಾ ಮಹಾ ಮಾರಿಯ ಮದ್ಯೆಯು ನಗರದಲ್ಲಿ ಜನರು ದಸರಾ ಹಬ್ಬದ ಅಂಗವಾಗಿ ಆಯುಧ ಪೂಜೆ ಕಾರ್ಯಕ್ರಮವನ್ನು ಎಲ್ಲೆಡೆ ಸರಳವಾಗಿ ಆಚರಿಸಿದರು.
ಕೋವಿಡ್-೧೯ ಕಾರಣದಲ್ಲಿ ವ್ಯಾಪಾರ ವಹಿವಾಟು ಕೂಡ ವಿರಳವಾಗಿತ್ತು.ಜನರು ಕೇವಲ ಹೂವು ಹಾಗು ಹಣ್ಣಗಳ ಖರಿದಿ ಹೊರತು ಪಡಿಸಿ ಬೇರೆ ಯಾವುದೇ ಅದ್ಧೂರಿ ಆಚರಣೆಗೆ ಮುಂದಾಗಿಲ್ಲದೆ ಸರಳವಾಗಿ ಆಚರಿಸಿದರು. ತಮ್ಮ ತಮ್ಮ ಮನೆಗಳಲ್ಲಿನ ಉಪಕರಣಗಳಿಗೆ ಪೂಜೆ ಸಲ್ಲಿಸಿ ಆಯುಧ ಪೂಜೆ ನೆರವೇರಿಸಿದರು.
ಅಲ್ಲದೆ ನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ನೇತೃತ್ವದಲ್ಲಿ ಎಲ್ಲಾ ಸಿಬ್ಬಂದಿಗಳು ಆಯುಧ ಪೂಜೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಠಾಣೆಯಲ್ಲಿನ ಎಲ್ಲಾ ಶಸ್ತ್ರಾಸ್ತ್ರಗಳನ್ನು ಸ್ವಚ್ಛಗೊಳಿಸಿ ಹೂಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಲಾಯಿತು.