ಕಲಬುರಗಿ: ಅಕ್ಟೋಬರ್ ೨೮ ರಂದು ನಡೆಯಲಿರುವ ಕರ್ನಾಟಕ ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಪ್ರಜ್ಞಾವಂತ ಶಿಕ್ಷಕರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಶರಣಪ್ಪ ಮಟ್ಟೂರ ಅವರಿಗೆ ಪ್ರಥಮ ಆಧ್ಯತೆ ಮತ ನೀಡುವಂತೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಝಳಕಿ ಮನವಿ ಮಾಡಿದ್ದಾರೆ.
೨೦೧೪ ರಲ್ಲಿ ನಡೆದ ಕರ್ನಾಟಕ ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಸತತ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶಶೀಲ್ ಜಿ. ನಮೋಶಿ ಅವರನ್ನು ಪರಭಾವಗೊಳಿಸುವ ಮೂಲಕ ವಿಧಾನ ಪರಿಷತ ಸದಸ್ಯರಾಗಿ ಆಯ್ಕೆಯಾದ ಶರಣಪ್ಪ ಮಟ್ಟೂರ ಅವರು, ಕಾನೂನು ತಜ್ಞರು ಹಾಗೂ ನ್ಯಾಯವಾದಿಗಳೂ, ಅಲ್ಲದೇ ವಿಧಾನ ಪರಿಷತ್ ಕಲಾಪದಲ್ಲಿ ಶಿಸ್ತಿನಿಂದ ಹಾಜರಾಗಿ ಶಿಕ್ಷಕರ ಬೇಡಿಕೆಗಳನ್ನು ಸರ್ಕಾರದ ಮುಂದೆ ತೆರದಿಡುವ ಮತ್ತು ಬಗೆ ಹರಿಸುವ ಪ್ರಮಾಣಿಕತೆಯಿಂದ ಮಾಡಿಕೊಟ್ಟಿತ್ತಾರೆ ಎಂದು ಝಳಕಿ ತಿಳಿಸಿದರು.
ಮಟ್ಟೂರ ಅವರ ಅವಧಿಯಲ್ಲಿ ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಶಾಲೆಗಳನ್ನು ಭೇಟಿ ನೀಡಿ ಕುಂದು ಕೊರತೆ ಆಲಿಸಿದ್ದಾರೆ. ಪ್ರಸ್ತುತ ಮರು ಆಯ್ಕೆ ಬಯಸಿ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ ಎಂದರು.
ಇನ್ನೂ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಶಶೀಲ್ ಜಿ. ನಮೋಶಿ ಅವರು ೨೦೧೦ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದು, ಅಧಿಕಾರದ ಆಸೆಗಾಗಿ ವಿಧಾನ ಸಭೆ ಚುನಾವಣೆ ಸ್ಪರ್ಧಿಸಿದ್ದಾರೆ. ಇದು ಅವರು ಶಿಕ್ಷಕರು ನೀಡಿದ ಮತವನ್ನು ತೀರಸ್ಕರಿಸುವ ಮೂಲಕ ಅವಮಾನ ಮಾಡಿದ್ದಂತೆ, ಆದರೆ ಈಗ ಚುನಾವಣೆ ಸಮಿಸುತ್ತಿದ್ದಂತೆ ಶಿಕ್ಷಕರು ಮತ್ತು ಶಾಲೆಗಳು ಈಗ ನಮೋಶಿ ಅವರಿಗೆ ನೆನಪಾಗುತ್ತಿವೆ ಎಂದು ಝಳಕಿ ಎಂದರು.
ಪ್ರಜ್ಞಾವಂತ ಶಿಕ್ಷಕರು ಇಂತವರಿಗೆ ಮತ ನೀಡದೆ ಶಿಕ್ಷಕರ ಪರ ಕಾಳಜಿವುಳ್ಳ ಶರಣಪ್ಪ ಮಟ್ಟೂರ ರವರಿಗೆ ಪ್ರಥಮ ಪ್ರಾಶ್ಯಸ್ತದ ಮತವನ್ನು ನೀಡುವುದರ ಮೂಲಕ ಗೆಲ್ಲಿಸಬೇಕೆಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಝಳಕಿ ಅವರು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.