ಕಲಬುರಗಿ: ವಾಡಿ ಪುರಸಭೆ ಆಡಳಿತ ನಿರ್ಲಕ್ಷ್ಯ ದಿಂದಾಗಿ ಈ ಬಾರಿ ವಾಡಿ ಸಾರ್ವಜನಿಕರು ಕತ್ತಲಲ್ಲೆ ದಸರಾ ಹಬ್ಬವನ್ನು ಆಚರಣೆ ಮಾಡುವ ಅನಿವಾರ್ಯ ಎದುರಾಗಿದೆ ಎಂದು ಪುರಸಭೆ ಸದಸ್ಯ ಪೃಥ್ವಿರಾಜ್ ಸೂರ್ಯವಂಶಿ ಆರೋಪಿಸಿದ್ದಾರೆ.
ಸಾಮಾನ್ಯವಾಗಿ ದಸರಾ ಹಬ್ಬದ ದಿನದಂದು ನಗರದವನ್ನು ವಿದ್ಯುತ್ ದ್ವೀಪಗಳಿಂದ ಅಲಂಕಾರಿಕಸಿ ಬೆಳದಿಂಗಳಲ್ಲಿ ದಸರಾವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಆದ್ರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಸರಳ ದಸರಾ ಆಚರಣೆ ಸರ್ಕಾರ ಆದೇಶಿಸಿದೆ. ವಿಪರ್ಯಾಸವೆಂದರೆ ವಾಡಿ ಪಟ್ಟಣದಲ್ಲಿ ಪುರಸಭೆ ಅಧಿಕಾರಿ ಬೇಜವಾಬ್ದಾರಿತನದಿಂದ ವಸರಳ ಆಚರಿಣೆಗೂ ಬ್ರೇಕ್ ಬಿದ್ದಿದೆ.
ವಾಡಿ ಜನರು ದಸರಾ ಹಬ್ಬವನ್ನು ಕತ್ತಲಲ್ಲಿ ಆಚರಣೆ ಮಾಡುವಂತಾಗಿದೆ. ಕಳದೆ ಒಂದು ತಿಂಗಳಿಂದ ಪಟ್ಟಣದ ಪ್ರಮುಖ ವೃತ್ತಗಳಾದ ಆಜಾದ್ ಚೌಕ್, ಶಿವಾಜಿ ಚೌಕ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಹೈಮಾಸ್ಕ್ ವಿದ್ಯುತ್ ದ್ವೀಪಗಳು ಆಳಾದರು ಸಹ ಪುರಸಭೆ ಅಧಿಕಾರಿಗಳು ಸರಿಪಡಿಸದೆ ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಹೈಮಾಸ್ಕ್ ದೀಪಗಳನ್ನು ಸರಿಪಡಿಸುವಂತೆ ಪೃಥ್ವಿರಾಜ್ ಆಗ್ರಹಿಸಿದ್ದಾರೆ.