ಕಲಬುರಗಿ: ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಯ ಕೇಂದ್ರ ಕಾರ್ಯಾಲಯದ ಹಾಗೂ ಕೇಂದ್ರ ವಿಚಕ್ಷಣಾ ಆಯೋಗದ ನಿರ್ದೇಶನದ ಮೇರೆಗೆ ನಗರದ ಆಳಂದ ರಸ್ತೆಯಲ್ಲಿರುವ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ, ಪ್ರಾದೇಶಿಕ ಕಾರ್ಯಾಲಯದಲ್ಲಿ ಭ್ರಷ್ಟಾಚಾರ ವಿರುದ್ದ ಜಾಗೃತಿ ಮೂಡಿಸಲು ದಿನಾಂಕ 27.10.2020 ರಿಂದ 02.11.2020 ರವರೆಗೆ “ಜಾಗೃತಿ ಅರಿವು ಸಪ್ತಾಹ” ವನ್ನು ಆಚರಿಸುತ್ತಿದೆ. ಈ ವರ್ಷದ ಜಾಗೃತಿ ಅರಿವು ಸಪ್ತಾಹದ ವಿಷಯವು “Vigilant India, Prosperous India” ಆಗಿರುತ್ತದೆ.
ಡಿ. ಹಣಮಂತಪ್ಪ, ಕ್ಷೇತ್ರೀಯ ಭವಿಷ್ಯ ನಿಧಿ ಆಯುಕ್ತರು, ಕಲಬುರಗಿ ಇವರು ದಿನಾಂಕ 27.10.2020 ರಂದು ಪೂರ್ವಾಹ್ನ 11:00 ಘಂಟೆಗೆ ಭವಿಷ್ಯ ನಿಧಿ ಕಾರ್ಯಾಲಯದ ಎಲ್ಲಾ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಪ್ರತಿಜ್ಞೆಯನ್ನು ತೆಗೆದುಕೊಳ್ಳುವುದರ ಮೂಲಕ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ ನೀಡಿದರು.
ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೋಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ ಪರಿಣಾಮಕಾರಿಯಾಗಿ ಅವುಗಳನ್ನು ಜಾರಿಗೊಳಿಸಲು ಮತ್ತು ಇಂದಿನ ವ್ಯವಸ್ಥೆಯನ್ನು ಸುಧಾರಿಸಲು ಸಂಬಂಧಪಟ್ಟವರೆಲ್ಲರನ್ನು ಒಗ್ಗೂಡಿಸಿ ಜಾಗೃತಿ ಮೂಡಿಸುವುದು ಈ ಸಪ್ತಾಹದ ಉದ್ದೇಶವಾಗಿರುತ್ತದೆಂದು ಹಾಗೂ ದಾರ್ಮಿಕತೆ ಮತ್ತು ಪ್ರಾಮಾಣಿಕತೆಯೊಂದಿಗೆ ಜೀವನ ನಡೆಸುವಂತೆ ಯುವಪೀಳಿಗೆಗೆ ಸ್ಪೂರ್ತಿ ತುಂಬುವುದುರ ಮೂಲಕ ಬಹಳಷ್ಟು ಪ್ರಗತಿಯನ್ನು ಸಾಧಿಸಬಹುದೆಂದು ಕೇಂದ್ರ ವಿಚಕ್ಷಣಾ ಆಯೋಗವು ತಿಳಿಸಿರುತ್ತದೆ.
ಕಾರ್ಯಕ್ರಮದಲ್ಲಿ ಸುಪ್ರೀತಿಕ ದಾಶ್, ಸಹಾಯಕ ಭವಿಷ್ಯ ನಿಧಿ ಆಯುಕ್ತರು, ಸಂಜಯ ಬಿರ್ಜೆ, ಅವಿನಾಶ್ ಕುಮಾರ ಸಿಂಗ್ , ಬಸವರಾಜ ಹೆಳವರ ಯಾಳಗಿ, ಪಿ.ರಾಜಕುಮಾರ, ಜೆ.ಜಾಫರ್, ಶಿವರಾಜ, ಮುಖೇಶ, ಕಲ್ಪನಾ ಮದಭಾವಿ ಹಾಗೂ ಕಾರ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.