ಸುರಪುರ ನಗರಸಭೆಯಲ್ಲಿ ಅರಳಿದ ಕಮಲ: ಸುಜಾತ ಜೇವರ್ಗಿ ಅಧ್ಯಕ್ಷ ಮಹೇಶ ಪಾಟೀಲ ಉಪಾಧ್ಯಕ್ಷ

0
52

ಸುರಪುರ: ಕಳೆದ ಎರಡು ವರ್ಷಗಳ ಹಿಂದೆಯೆ ನಗರಸಭೆಗೆ ಚುನಾವಣೆ ನಡೆದು ಇಲ್ಲಿಯವರೆಗೂ ಅಧ್ಯಕ್ಷ ಉಪಾಧ್ಯಕ್ಷರ ನೇಮಕಗೊಳ್ಳದೆ ಅಭಿವೃಧ್ಧಿಗೆ ದೊಡ್ಡ ಹಿನ್ನಡೆಯಾಗಿತ್ತು.ಸರಕಾರ ಈಗ ನೂತನ ಅಧ್ಯಕ್ಷ ಉಪಾಧ್ಯಕ್ಷರ ನೇಮಕಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರಿಂದ ಈಗ ನೂತನ ಅಧ್ಯಕ್ಷ ಉಪಾಧ್ಯಕ್ಷರ ನೇಮಕಕ್ಕೆ ಚುನಾವಣೆ ನಡೆಸಲಾಯಿತು.

ಯಾದಗಿರಿ ಸಹಾಯಕ ಆಯುಕ್ತರಾಗಿರುವ ಶಂಕರಗೌಡ ಸೋಮನಾಳ ಅವರು ಚುನಾವಣಾ ಅಧಿಕಾರಿಗಳಾಗಿ ಆಗಮಿಸಿ ಚುನಾವಣೆ ನಡೆಸಿದರು.ಒಟ್ಟು ೩೧ ಸದಸ್ಯರನ್ನು ಹೊಂದಿರುವ ಸುರಪುರ ನಗರಸಭೆಯಲ್ಲಿ ಬಿಜೆಪಿಯ ೧೬ ಹಾಗು ಕಾಂಗ್ರೆಸ್‌ನ ೧೫ ಜನ ಸದಸ್ಯರಿದ್ದಾರೆ.ಗುರುವಾರ ಬೆಳಿಗ್ಗೆ ಚುನಾವಣಾಧಿಕಾರಿಗಳು ಆಗಮಿಸಿ ನಾಮಪತ್ರ ಸಲ್ಲಿಕೆ ಪ್ರಕ್ರೀಯೆ ಆರಂಭಿಸಿದರು.ಅದರಂತೆ ಬಿಜೆಪಿ ಪಕ್ಷದ ಸುಜಾತಾ ವೇಣುಗೋಪಾಲ ಜೇವರ್ಗಿ ಅಧ್ಯಕ್ಷ ಸ್ಥಾನಕ್ಕೆ ಹಾಗು ಮಹೇಶ ಎಸ್.ಎನ್.ಪಾಟೀಲ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು.

Contact Your\'s Advertisement; 9902492681

ಚುನಾವಣೆ ಸಮಯ ನಿಗದಿ ಪಡಿಸಿದ್ದ ೧೨ ಗಂಟೆಯ ವರೆಗೆ ಕೇವಲ ಎರಡೇ ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ೧೨ ಗಂಟೆಗೆ ಚುನಾವಣಾ ಪ್ರಕ್ರೀಯೆ ಮುಗಿಸಿದ ಚುನಾವಣಾಧಿಕಾರಿಗಳು ಕೇವಲ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಸುಜಾತಾ ವೇಣುಗೋಪಾಲ ಜೇವರ್ಗಿ ಅವರು ಅಧ್ಯಕ್ಷರಾಗಿ ಹಾಗು ಮಹೇಶ ಎಸ್.ಎನ್.ಪಾಟೀಲ್ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.

ನಂತರ ನಗರಸಭೆಗೆ ಶಾಸಕ ನರಸಿಂಹ ನಾಯಕ (ರಾಜುಗೌಡ) ಆಗಮಿಸಿ ನೂತನವಾಗಿ ಆಯ್ಕೆಗೊಂಡ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸಿ ನಂತರ ಮಾತನಾಡಿ,ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಕ್ಕೆ ಸಹಕರಿಸಿದ ಬಿಜೆಪಿ ಕಾಂಗ್ರೆಸ್ ಮತ್ತಿತತರೆ ಎಲ್ಲಾ ಪಕ್ಷಗಳ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಅಲ್ಲದೆ ಅಧ್ಯಕ್ಷ ಉಪಾಧ್ಯಕ್ಷರು ಯಾವುದೇ ಸದಸ್ಯರ ಬಗ್ಗೆ ಭೇದ ಭಾವ ಮಾಡದೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸದ ರಾಜಾ ಅಮರೇಶ್ವರ ನಾಯಕ ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ) ನಗರಸಬೆ ಪವರಾಯುಕ್ತ ಶಾಂತಪ್ಪ ಮುಖಂಡರಾದ ವೇಣುಗೋಪಾ ಜೇವರ್ಗಿ ಹೆಚ್.ಸಿ.ಪಾಟೀಲ ಬಸನಗೌಡ ಹಳ್ಳಿಕೋಟಿ ಸುರೇಶ ಸಜ್ಜನ್ ರಾಜಾ ಪಾಮನಾಯಕ ದೊಡ್ಡ ದೇಸಾಯಿ ಶಂಕರ ನಾಯಕ ಹಾಗು ನಗರಸಭೆ ಸದಸ್ಯರಾದ ವೇಣುಮಾಧವ ನಾಯಕ ವಿಷ್ಣು ಗುತ್ತೇದಾರ ನರಸಿಂಹಕಾಂತ ಪಂಚಮಗಿರಿ ಶಿವಕುಮಾರ ಕಟ್ಟಿಮನಿ ಮಹ್ಮದ ಗೌಸ್ ಹಾಗು ಕಾಂಗ್ರೆಸ್ ಸದಸ್ಯರಾದ ರಾಜಾ ಪಿಡ್ಡ ನಾಯಕ ಸೋಮನಾಥ ಡೊಣ್ಣಿಗೇರಾ ಜುಮ್ಮಣ್ಣ ಕುಂಬಾರಪೇಟೆ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here