ಕಲಬುರಗಿ: ಕನ್ನಡ ಮತ್ತು ಮಹಿಳಾ ಸಬಲೀಕರಣಕ್ಕೆ ಹಾಗೂ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನ ಕಾರ್ಯಅನುಪಮವಾದದ್ದು, ಅವಿಸ್ಮರಣೀಯವಾದದ್ದು ಎಂದು ಸಂಸ್ಥಾನದ ೮ನೇ ಪೀಠಾಧಿಪತಿ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಹಾದಾಸೋಹಿ ಪೂಜ್ಯಡಾ. ಶರಣಬಸವಪ್ಪಅಪ್ಪಾಅಭಿಪ್ರಾಯ ಪಟ್ಟರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಸಮಾವೇಶ ಸಭಾಗಂಣದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕರಾಜ್ಯೋತ್ಸವ ಹಾಗೂ ೯ನೇ ಪೀಠಾಧಿಪತಿ ಪೂಜ್ಯ ಚಿ. ದೊಡ್ಡಪ್ಪ ಅಪ್ಪಾರವರ ಜನ್ಮದಿನೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಈ ಕಲ್ಯಾಣಕರ್ನಾಟಕ ಭಾಗದಲ್ಲಿ ಹಿಂದಿ, ಮರಾಠಿ, ಉರ್ದು ಭಾಷೆಗಳ ಪ್ರಭಾವದ ಮಧ್ಯೆಕನ್ನಡ ಭಾಷೆಯನ್ನು ಉಳಿಸುವಲ್ಲಿ ಭಾಲ್ಕಿಯ ಪಟ್ಟದೇವರು, ರಮಾನಂದ ತೀರ್ಥ ಸ್ವಾಮಿಗಳು ಹಾಗೂ ಶ್ರೀ ಶರಣಬಸವೇಶ್ವರ ಸಂಸ್ಥಾನದ ೭ನೇ ಪೀಠಾಧಿಪತಿಗಳಾಗಿದ್ದ ಪೂಜ್ಯ ಲಿಂಗೈಕ್ಯ ದೊಡ್ಡಪ್ಪಅಪ್ಪಾರವರು ಮಾಡಿದಕಾರ್ಯ ಶ್ಲಾಘನೀಯವಾದದ್ದು ಎಂದರು.
ನಿಜಾಮರ ಆಳ್ವಿಕೆಯಲ್ಲಿ ೧೯೩೪ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಕನ್ನಡ ಮಾಧ್ಯಮ ಶಾಲೆ ಆರಂಭಿಸುವದರ ಮೂಲಕ ಅಂದೇಕನ್ನಡದ ಕಹಳೆಯನ್ನು ಊದಿದವರು ಪೂಜ್ಯದೊಡ್ಡಪ್ಪಅಪ್ಪಾರವರು. ಅವರು ಆರಂಭಿಸಿದ್ದ ಈ ಶೈಕ್ಷಣಿಕ ಕೇತ್ರಕ್ಕೆಇಂದು ನಾವೆಲ್ಲರೂ ತನು ಮನ ಧನದಿಂzದುಡಿಯಬೇಕುಎಂದುಕರೆ ನೀಡಿದರು.
ಪೂಜ್ಯಜಗದ್ಗುರುಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು ೧೨ನೇ ಶತಮಾನದ ಬಸವಾದಿ ಶರಣರು. ಅದೇರೀತಿ ಈ ಭಾಗದಲ್ಲಿಪೂಜ್ಯದೊಡ್ಡಪ್ಪಅಪ್ಪಾರವರು ಮತ್ತು ಪೂಜ್ಯಡಾ.ಶರಣಬಸವಪ್ಪಅಪ್ಪಾರವರು ಕನ್ನ ಡ ಭಾಷೆ ಮತ್ತು ಶೈಕ್ಷಣಿಕಕೇತ್ರವನ್ನು ಶ್ರೀಮಂತಗೊಳಿಸುವಲ್ಲಿ ವಿಶಿಷ್ಟವಾದ ಪಾತ್ರ ನಿರ್ವಹಿಸಿದ್ದಾರೆ ಎಂದರು.
ಈ ಭಾಗದಲ್ಲಿ ಪೂಜ್ಯರು ಮೊದಲ ಬಾರಿಗೆ ಖಾಸಗಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಹಲವು ವಿಶ್ವವಿದ್ಯಾಲಯಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಕಾರ್ಯಮಾಡಿದ್ದಾರೆ. ಈ ವಿಶ್ವವಿದ್ಯಾಲಯಕ್ಕೆ ಸರ್ಕಾರದಿಂದಇನ್ನೂ ಹೆಚ್ಚಿನ ಪ್ರಾಶಸ್ಥ್ಯ ದೊರೆಯಬೇಕಾಗಿದೆ ಎಂದರು.
ವಿವಿ ಕುಲಸಚಿವಡಾ.ಅನೀಲಕುಮಾರ ಬಿಡವೆ ಮಾತನಾಡಿ, ೨೦೧೭ರ ವರ್ಷವನ್ನು ನಮ್ಮ ಸಂಸ್ಥಾನದಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆಯುವ ವರ್ಷವಾಗಿದೆ. ಈ ವರ್ಷವೇ ನಮ್ಮ ಶರಣ ಬಸವ ವಿಶ್ವವಿದ್ಯಾಲಯ ಹಾಗೂ ನಮ್ಮ ಸಂಸ್ಥಾನದ ೯ನೇ ಪೀಠಾಧಿಪತಿ ಪೂಜ್ಯಚಿ. ದೊಡ್ಡಪ್ಪಅಪ್ಪಾರವರುಜನ್ಮ ಪಡೆದಿರುವದು ವಿಶೇಷವಾಗಿz ಎಂದರು.
೧೯೩೪ರಲ್ಲಿ ಪೂಜ್ಯದೊಡ್ಡಪ್ಪಅಪ್ಪಾರವರು ಈ ಭಾಗದಲ್ಲಿ ಕನ್ನಡ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಮಹಾದೇವಿ ಕನ್ಯಾ ಶಾಲೆಯನ್ನು ಆರಂಭಿಸಿದ್ದರು. ಅದೇ ವರ್ಷವೇ ಪೂಜ್ಯ ಶರಣಬಸವಪ್ಪಅಪ್ಪಾರವರುಜನ್ಮತಾಳಿದರು. ಈ ಸಂಸ್ಥೆಯ ಶೈಕ್ಷಣಿಕ ಹುಟ್ಟು ಮತ್ತು ಸಂಸ್ಥಾನದ ಭಾವಿ ಪೀಠಾಧಿಪತಿಗಳ ಹುಟ್ಟುಒಂದೇಆಗಿರುವುದು ವಿಶೇಷ ಸಂಗತಿಯಾಗಿದೆ. ಈ ವರ್ಷಗಳನ್ನು ನಮ್ಮ ಸಂಸ್ಥಾನದಇತಿಹಾಸದಲ್ಲಿ ಸುವರ್ಣಅಕ್ಷರದಲ್ಲಿ ಬರೆಯಲ್ಪಡುವ ವರ್ಷವಾಗಿವೆ ಎಂದರು.
ವಿವಿ ಸಮ ಕುಲಪತಿಡಾ. ವಿ.ಡಿ. ಮೈತ್ರಿ ಅಧ್ಯಕ್ಷೀಯ ಭಾಷಣ ಮಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್. ಪಾಟೀಲ ರಾಜ್ಯೋತ್ಸವದ ಬಗ್ಗೆ ಹಾಗೂ ಡಾ.ಸಾರೀಕಾದೇವಿ ಕಾಳಗಿ ಪೂಜ್ಯ ಚಿ. ದೊಡ್ಡಪ್ಪಅಪ್ಪಾರವರಜನ್ಮದಿನ ಉದ್ದೇಶಿಸಿ ವಿಶೇಷ ಉಪನ್ಯಾಸ ನೀಡಿದರು.
ದಿವ್ಯಾಂಗ ದೀಪ್ತಿ ಕವನ ಸಂಕಲನದಿಂದ ಗುಲ್ಬರ್ಗ ವಿವಿಯ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದಡಾ.ಶಿವರಾಜ ಶಾಸ್ತ್ರೀ ಹೇರೂರ, ಕೀತ್ತೂರರಾಣಿಚೆನ್ನಮ್ಮ ಪ್ರಶಸ್ತಿ ಪಡೆದ ವಿವಿ ಡೀನ್‌ಡಾ.ಲಕ್ಷ್ಮಿ ಪಾಟೀಲ, ಮಾಕಾ ಹಾಗೂ ಶರಣಬಸವ ವಿಶ್ವವಿದ್ಯಾಲಯಕ್ಕೆ ಕರ್ನಾಟಕ ಸರಕಾರದಿಂದ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಸುನೀಲ ಬನಶೆಟ್ಟಿ ಇವರಿಗೆ ವಿಶ್ವವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ವಿವಿ ಡೀನ್‌ಡಾ.ಲಕ್ಷ್ಮಿ ಪಾಟೀಲ, ಮಾಕಾ ಹಾಗೂ ಡಾ.ಶಿವರಾಜ ಶಾಸ್ತ್ರಿ ಹೆರೂರ ಮಾತನಾಡಿದರು. ಡಾ. ನಾನಾಸಾಹೆಬ್ ಹಚ್ಚಡದ್ ನಿರೂಪಿಸಿದರು. ಪ್ರೊ.ರೇವಯ್ಯ ವಸ್ತ್ರದಮಠ್ ಪ್ರಾರ್ಥನೆ ಗೀತೆ ಹಾಡಿದರು.ಡಾ. ಸುಮಂಗಲಾ ರೆಡ್ಡಿ ಸ್ವಾಗತಿಸಿದರು.ಡಾ. ಚಿದಾನಂದಚಿಕ್ಕಮಠ ವಂದಿಸಿದರು.
ಮೌಲ್ಯಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ, ವಿವಿ ಡೀನ್ ಬಸವರಾಜ ಮಠಪತಿ ಇತರರು ಉಪಸ್ಥಿತರಿದ್ದರು.