ಶಹಾಬಾದ:ಉತ್ತಮವಾಗಿ ಬೆಳೆದು ನಿಂತ ತೊಗರಿ ಬೆಳೆಗೆ ಮಂಜು ಕವಿದ ಪರಿಣಾಮ ಹೂವುಗಳು ಉದುರಿತ್ತಿದ್ದು, ಇದಕ್ಕೆ ಕೃಷಿ ಅಧಿಕಾರಿಗಳು ಮತ್ತು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳು ಬೆಳೆಗಳ ರಕ್ಷಣೆಗೆ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕೆಂದು ಚಿತ್ತಾಪೂರ ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್ ತಿಳಿಸಿದ್ದಾರೆ.
ಈಗಾಗಲೇ ಪ್ರಸಕ್ತ ವರ್ಷ ಮಳೆ ಹೆಚ್ಚಾಗಿ ಹೆಸರು ಮತ್ತು ಉದ್ದು ಸಂಪೂರ್ಣ ನಷ್ಟವಾಗಿದೆ.ನಂತರ ಅತಿಯಾದ ಮಳೆಯಿಂದ ನದಿಯಲ್ಲಿ ಪ್ರವಾಹ ಉಂಟಾಗಿ ಸಾವಿರಾರು ಎಕರೆ ಪ್ರದೇಶದ ಬೆಳೆಗಳು ನಷ್ಟವಾಗಿವೆ. ಅತಿವೃಷ್ಟಿಯಿಂದ ರೈತರ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಇರುವ ತೊಗರಿ ಬೆಳೆ ಹೂವು ಬಿಟ್ಟು ನಳನಳಿಸುತ್ತಿರುವಾಗಲೇ ಮಂಜು ಆವರಿಸಿ ಹೂವುಗಳು ಉದುರಿ ಬೀಳುತ್ತಿವೆ.ಅಲ್ಲದೇ ಚಳ್ಳಿ ಕಾಯಿ ಕಡಿದು ಬೀಳುತ್ತಿರುವುದರಿಂದ ರೈತರು ಎಲ್ಲಿಲ್ಲದ ಸಂಕಷ್ಟ ಹೊರಹಾಕುತ್ತಿದ್ದಾರೆ.ಆದ್ದರಿಂದ ಚಿತ್ತಾಪೂರ, ಶಹಾಬಾದ, ಕಾಳಗಿ ತಾಲೂಕಿನ ಕೃಷಿ ಅಧಿಕಾರಿಗಳು ಮತ್ತು ರೈತ ಸಂಪರ್ಕ ಕೇಂದ್ರದ ಸಿಬ್ಬಂದಿಗಳು ಬೆಳೆಗಳ ರಕ್ಷಣೆಗೆ ಸೂಕ್ತ ಮಾರ್ಗದರ್ಶನ ನೀಡುವ ಅಗತ್ಯವಿದೆ.ಆದ್ದರಿಂದ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಿ ಕಷ್ಟದಲ್ಲಿರುವ ಅನ್ನದಾತನಿಗೆ ಬೆಳೆ ಹಾಳಾಗದಂತೆ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದ್ದಾರೆ.