ಸ್ವಾತಂತ್ರ್ಯಕ್ಕಾಗಿ ನೇಣಿಗೆ ಶರಣಾದ ಅಪ್ರತಿಮ ದೇಶಭಕ್ತ ಅಶ್ಫಾಕ್ ಉಲ್ಲಾ ಖಾನ್-ಇಬ್ರಾಹಿಂಪೂರ

0
56

ಶಹಾಬಾದ:ಸ್ವಾತಂತ್ರ್ಯಕ್ಕಾಗಿ ನೇಣು ಹಗ್ಗವನ್ನೇ ಹಾರವನ್ನಾಗಿಸಿಕೊಂಡ ಅಪ್ರತಿಮ ಕ್ರಾಂತಿಕಾರಿ ದೇಶಭಕ್ತ ಅಶ್ಫಾಕ್ ಉಲ್ಲಾ ಖಾನ್ ಎಂದು ಎಸಯುಸಿಐ ಪಕ್ಷದ ಜಿಲ್ಲಾ ಸಮಿತಿ ಸದಸ್ಯ ರಾಮಣ್ಣ ಇಬ್ರಾಹಿಂಪೂರ ಹೇಳಿದರು.

ಅವರು ನಗರದ ಎಐಡಿವಾಯ್ಓ ಕಛೇರಿಯಲ್ಲಿ ಎಐಡಿವಾಯ್ಓ ಸಂಘಟನೆ ವತಿಯಿಂದ ಆಯೋಜಿಸಲಾದ ಅಶ್ಫಾಕ್ ಉಲ್ಲಾ ಖಾನ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳು ಮಾತನಾಡಿದರು.

Contact Your\'s Advertisement; 9902492681

ಅಶ್ಫಾಕ್ ಉಲ್ಲಾ ಖಾನ್ ಅವರು ಚಂದ್ರಶೇಖರ ಆಜಾದ್ ಮತ್ತು ರಾಮಪ್ರಸಾದ ಬಿಸ್ಮಿಲರಂತಹ ಸ್ವಾತಂತ್ರ್ಯ ಹೋರಾಟಗಾರರೊಂದಿಗೆ ಬೆರೆತು ಹೋರಾಟದ ಕಿಚ್ಚನ್ನು ಹೆಚ್ಚಿಸಿದವರು. ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದಕ್ಕಾಗಿ ಬಂಧಿಸಲ್ಪಟ್ಟವರು.ಕಟ್ಟಾ ಮುಸ್ಲಿಂ ಆಗಿದ್ದ ಅವರು ರಾಮಪ್ರಸಾದ ಬಿಸ್ಮಿಲ್ ಮತ್ತು ತನ್ನ ನಡುವೆ ಬ್ರಿಟಿಷ ಅಧಿಕಾರಿಯೊಬ್ಬರು ಮತೀಯ ಸಂಘರ್ಷ ತಂದಿಡುವ ಸಂದರ್ಭದಲ್ಲಿ ಅದಕ್ಕೆ ಜಗ್ಗದೇ ರಾಷ್ಟ್ರೀಯ ಚಿಂತನೆಗೆ ತನ್ನನ್ನು ಅರ್ಪಿಸಿಕೊಂಡವರು.ಇಂದಿನ ಪ್ರತ್ಯೇಕತಾವಾದಿಗಳಿಗೆ ಇವರ ಜೀವನ ಒಂದು ಪಾಠವೇ ಸರಿ ಎಂದು ಹೇಳಿದರು.

ಎಐಡಿವಾಯ್ಓ ಜಿಲ್ಲಾ ಕಾರ್ಯದರ್ಶಿ ಜಗನ್ನಾಥ.ಎಸ್.ಹೆಚ್ ಮಾತನಾಡಿ,ಸ್ವಾತಂತ್ರ್ಯ ಹೋರಾಟದಲ್ಲಿ ಕಟ್ಟಕಡೆಯವರೆಗೂ ಬ್ರಿಟಷರಿಗೆ ಶರಣಾಗಲು ನಿರಾಕರಿಸಿದ ಅಶ್ಫಾಕ್ ಉಲ್ಲಾ ಖಾನ್, ಮರಣ ದಂಡನೆಯನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ.ಇಂತಹ ಅಪ್ಪಟ ದೇಶಭಕ್ತನನ್ನು ಕಡೆಗಣಿಸಿ, ಬ್ರಿಟಿಷರಿಗೆ ಎರಡೆರಡು ಬಾರಿ ತಪ್ಪೊಪ್ಪಿಗೆ ಬರೆದುಕೊಟ್ಟವರನ್ನು ಸ್ವಾತಂತ್ರ್ಯ ಯೋಧನನ್ನಾಗಿಸುವ ಪ್ರಯತ್ನ ಈ ದೇಶದಲ್ಲಿ ನಡೆಯುತ್ತಿರುವುದು ಮಾತ್ರ ದುರಂತ. ಅಶ್ಫಾಕ್ ಉಲ್ಲಾ ಖಾನ್ ನಾಯಕರ ಬದುಕನ್ನು ಇಂದು ತಿಳಿದುಕೊಳ್ಳಬೇಕಾಗಿದೆ.ಅಲ್ಲದೇ ರಾಮಪ್ರಸಾದ ಬಿಸ್ಮಿಲ್ ಮತ್ತು ಅಶ್ಫಾಕ್ ಉಲ್ಲಾ ಖಾನ್ ಸ್ನೇಹ ಇಂದಿನ ವರ್ತಮಾನದ ಗಾಯಗಳಿಗೆ ಉತ್ತಮ ಔಷಧಿಯಾಗಿದೆ ಎಂದು ಹೇಳಿದರು. ಎಸ್.ಎಸ್.ಮರಗೋಳ ಕಾಲೇಜಿನ ಉಪನ್ಯಾಸಕ ಮಹ್ಮದ್ ಇರ್ಫಾನ ಮಾತನಾಡಿದರು. ಎಐಡಿವಾಯ್ಓ ಸ್ಥಳೀಯ ಅಧ್ಯಕ್ಷ ಸಿದ್ದು ಚೌಧರಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಸಮಿತಿ ಸದಸ್ಯ ಶಿವಕುಮಾರ.ಇ.ಕೆ,ನೀಲಕಂಠ ಹುಲಿ,ವಿಶ್ವ ಸಿಂಘೆ, ಪ್ರವೀಣ ಬಣಮಿಕರ್,ಅಜಯ ದೊರೆ, ಮಲ್ಲಿಕಾರ್ಜುನ ದೊರೆ, ರಘು ಪವಾರ, ಪ್ರಕಾಶ ಯಲಗೋಡ,ರಾಕೇಶ ಪೋತನಕರ್,ವೆಂಕಟೇಶ ಪವಾರ, ತಿರುಪತಿ ಪವಾರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here