ಕಲಬುರಗಿ: ಇಂದು ಜಿಲ್ಲೆಯ ಸೇಡಂತಾಲೂಕಿನ ಸರಕಾರಿ ಪ್ರಥಮದರ್ಜೆ ಪದವಿ ಮಹಾವಿದ್ಯಾಲಯದ ಮುಂದೆಪದವಿ, ಹಾಗೂ ಸ್ನಾತಕೋತ್ತರ, ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳ ಫಲಕ ಹಿಡಿದುಪ್ರತಿಭಟನೆ ಮಾಡಲಾಯಿತು.ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್‌ಗಳ ಪರೀಕ್ಷೆ ನಡೆಸಬಾರದು ಹಾಗೂ ಎರಡುಡೋಸ್‌ಉಚಿತ ಲಸಿಕೆ ನಂತರವೆಆಫ್ ಲೈನ್ ತರಗತಿಗಳು/ ಪರೀಕ್ಷೆ ನಡೆಸಬೇಕುಎಂದು ಸರಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದ ಪ್ರಾಂಶುಪಾಲರ ಮುಖಾಂತರ, ಮಾನ್ಯ ಗು ವಿ ವಿ ಕುಲಪತಿಗಳಿಗೆ, ಹಾಗೂ ಸಹಾಯಕಆಯುಕ್ತರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ್ರ ಸಲ್ಲಿಸುವುದರ ಮುಖಾಂತರವಿದ್ಯಾರ್ಥಿಗಳು ತಮ್ಮಆಕ್ರೋಶವನ್ನು ವ್ಯಕ್ತಪಡಿಸಿದರು.
ಈ ಒಂದು ಹೋರಾಟವನ್ನು ಉದ್ದೇಶಿಸಿ ಎಐಡಿಎಸ್‌ಓಸೇಡಂತಾಲೂಕು ಸಂಚಾಲಕರಾದಗೌತಮ್‌ಎಮ್ ಪರತೂರಕರ್‌ರವರು ಮಾತನಾಡುತ್ತಕಳೆದ ತಿಂಗಳಿಂದ ರಾಜ್ಯಾದಾದಂತ್ಯ ಸಾವಿರಾರು ವಿದ್ಯಾರ್ಥಿಗಳು ಹಲವಾರು ಹಂತದ ಹೋರಾಟಗಳು ನಡೆಸುತ್ತಿದ್ದುಉನ್ನತ ಶಿಕ್ಷಣ ಸಚಿವರಾದಅಶ್ವಥ್ ನಾರಾಯಣರವರಿಗೆ, ರಾಜ್ಯದ ಹಲವಾರು ಸಚಿವರಿಗೆ ಹಾಗೂಎಮ್‌ಎಲ್ ಎ ಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ,ರಾಜ್ಯಾದ್ಯಾಂತನಡೆದಗೂಗಲ್ ಫಾರ್ಮ್ ಸಮೀಕ್ಷೆಯಲ್ಲಿ ಸುಮಾರು೫೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು, ಕಳೆದ ಸೆಮಿಸ್ಟರ್ ಪರೀಕ್ಷೆಯನ್ನು ಪ್ರಚಲಿತ ಸೆಮಿಸ್ಟರ್ ನಡುವೆ ನಡೆಸುವುದು ಬೇಡ ಎಂಬ ಅಭಿಪ್ರಾಯ ಮಂಡಿಸಿದರು. ಈ ಒಂದು ಹೋರಾಟಕ್ಕೆರಾಜ್ಯದ ಹಲವಾರು ಪೋಷಕರು,ಶಿಕ್ಷಕರು, ವೈದ್ಯರು,ಶಿಕ್ಷಣ ಪ್ರೇಮಿಗಳು೧ಲಕ್ಷ ಕ್ಕೂ ಹೆಚ್ಚು ಸಹಿ ಮಾಡಿ ಬೆಂಬಲ ಸೂಚಿಸಿದ್ದಾರೆ.ಹಾಗೂ ವಿಶ್ವವಿದ್ಯಾಲಯಗಳ ಮಾಜಿ ಕುಲಪತಿಗಳು ಸಹ ಬೆಂಬಲಿಸಿದ್ದಾರೆ.
ಈ ಎಲ್ಲಾ ಹಂತದ ಹೋರಾಟ ನಡೆಸಿದಾಗಿಯೂವಿದ್ಯಾರ್ಥಿಗಳ ಆತಂಕವನ್ನುಅರಿಯದಸರ್ಕಾರ ಹಾಗೂ ವಿಶ್ವವಿದ್ಯಾಲಯಗಳೂಇಲ್ಲಿವರೆಗೂವಿದ್ಯಾರ್ಥಿಗಳ ಬೇಡಿಕೆಗಳ ಪರವಾಗಿಯಾವುದೇನೀರ್ಧಾರವನ್ನು ಕೈಗೊಳ್ಳದೆಜಾಣ ಮೌನ ವಹಿಸಿದ್ದಾರೆ ಹಾಗೂ ಎಲ್ಲಾರೀತಿಯಾ ಪರೀಕ್ಷೆತಯಾರಿಯಲ್ಲಿ ವಿಶ್ವವಿದ್ಯಾಲಯಗಳು ಮುಳುಗಿವೆ.ವಿದ್ಯಾರ್ಥಿಗಳ ಜೀವಗಳನ್ನು ಲೆಕ್ಕಿಸದೇ ಪರೀಕ್ಷೆಗಳನ್ನು ನಡೆಸುವುದೇಇವರ ಪ್ರಮುಖಗುರಿಯಾಗಿದೆ. ಇದೆಲ್ಲವನ್ನು ಗಮನಿಸಿದರೆ ವಿದ್ಯಾರ್ಥಿಗಳ ಬಗ್ಗೆ ಇವರಿಗಿರುವ ಕಾಳಜಿ ಸ್ಪಷ್ಟವಾಗುತ್ತದೆ.
ಈ ಕೂಡಲೇಹಿಂದಿನ೧,೩,ಮತ್ತು೫ನೇ ಸೆಮಿಸ್ಟರನ್ನು ರದ್ದುಗೊಳಿಸಿ. ಮುಂದಿನ೨,೪,ಮತ್ತು೬ನೇ ಸೆಮಿಸ್ಟರನ್ನುಎರಡುಡೋಸ್‌ಉಚಿತ ಲಸಿಕೆಗಳನ್ನು ನೀಡಿದ ನಂತರವೆಆಫ್ ಲೈನ್ ತರಗತಿಗಳು/ ಪರೀಕ್ಷೆ ನಡೆಸಬೇಕು ಹಾಗೂ ಯೂನಿವರ್ಸಿಟಿ ಗ್ರಾಂಟ್ಸ್‌ಕಮಿಷನ್ (ಯುಜಿಸಿ) ನೀಡಿದ ಮಾರ್ಗ ಸೂಚಿಯನ್ನು ಈ ಕೂಡಲೆಜಾರಿಗೆತರುವಂತೆಆಗ್ರಹಿಸಿದರು.
ಈ ಹೋರಾಟದಲ್ಲಿಜಿಲ್ಲಾಸಮಿತಿ ಸದ್ಯಸಗೋವಿಂದ ಯಳವಾರ್, ವಿದ್ಯಾರ್ಥಿಗಳಾದ ಬಸವರಾಜ, ಪೂಜರಾಣಿ, ಅಭಿಷೇಕ ಹೂಗಾರ್, ಲಕ್ಷ್ಮಿಕಾಂತಗುತ್ತೆದಾರ,ಜಗದೀಶ್ ಶ್ರಿಧರ ಸಲಗಾರ್, ಜಗದೀಶ್ ಪಾಟೀಲ್, ರಾಹೂಲ್‌ಊಡಗಿ,ರೋಹನ್‌ಇತರರು ಭಾಗವಹಿಸಿದ್ದರು.