ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದು ಅತ್ಯಗತ್ಯ: ಡಾ: ಎಸ್.ಎಸ್.ಗುಬ್ಬಿ

0
67

ಶಹಾಪುರ :ಹಗಲಿರುಳು ಪರಿಶ್ರಮ,ಕಠಿಣ ವಿದ್ಯಾಭ್ಯಾಸದ ಜೊತೆಗೆ ಬದುಕಿಗೆ ಪೂರಕವಾದ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಸಾಧನೆಯ ಮೆಟ್ಟಿಲೇರಲು ಸಾಧ್ಯ ಎಂದು ಕಲಬುರಗಿಯ ಖ್ಯಾತ ವೈದ್ಯರಾದ ಡಾ:ಎಸ್.ಎಸ್. ಗುಬ್ಬಿ ಹೇಳಿದರು.

ನಗರದ ಚರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಡಾ. ಅಮರೇಶ ಅರುಣಿ ಅವರಿಗೆ ಹಮ್ಮಿಕೊಂಡಿರುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಪಟ್ಟಣದ ಶ್ರೀಮತಿ ಶಿವಲೀಲಾ ಬಸವರಾಜ ಅರುಣಿ ಅವರ ಪುತ್ರ ಡಾ.ಅಮರೇಶ್ ಅರುಣಿಯವರು ದೆಹಲಿಯ(AIMS) ಅತ್ಯುನ್ನತ ಪದವಿಯಾದ”ರೋಬೋಟಿಕ್” ಸರ್ಜರಿ ಪ್ರವೇಶಾತಿ ಪಡೆದ ಕರ್ನಾಟಕದ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಕುಂಬಾರಗೇರಿ ಹಿರೇಮಠದ ಪರಮಪೂಜ್ಯರಾದ ಸೂಗುರೇಶ್ವರ ಶಿವಾಚಾರ್ಯರು ಹೇಳಿದರು.

ಸರಕಾರಿ ಶಾಲೆಯಲ್ಲಿ ಓದುವ ಮುಖಾಂತರ ಬೇರೆ ಶಾಲೆಗಳಿಗಿಂತ ಕಡಿಮೆಯೇನಿಲ್ಲ ಎಂಬುದನ್ನು ಸಾಧನೆ ಮಾಡಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ ಎಂದು,ಸುರಪುರದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಬಸವರಾಜ ಜಮದ್ರಖಾನಿ ಹೇಳಿದರು. ವೈದ್ಯಲೋಕದಲ್ಲಿ ಮುಂದೊಂದು ದಿನ ಈ ನಾಡಿಗೆ ಇತಿಹಾಸ ಸೃಷ್ಟಿಸಲಿ ಎಂದು ಈ ಸಂದರ್ಭದಲ್ಲಿ ಶುಭ ಹಾರೈಸಿದರು.

ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಗುರು ಸಿದ್ಧಲಿಂಗೇಶ್ವರ ಸಂಸ್ಥಾನ ಮಠ ಕನ್ಯಾಕೋಳೂರ ಸ್ವಾಮಿಗಳಾದ ಶ್ರೀ ಷ.ಬ್ರ.ಚನ್ನವೀರ ಶಿವಾಚಾರ್ಯರು ವಹಿಸಿಕೊಂಡಿದ್ದರು,ಈ ಸಂದರ್ಭದಲ್ಲಿ ಸಮಾಜಮುಖಿ ಕೆಲಸ ಮಾಡಿದ ಐದು ಜನ ಹಿರಿಯ ಸಾಧಕರಾದ ಗೌಡಪ್ಪಗೌಡ ಮಾಸ್ಟರ್,ಗುರುಸಂಗಪ್ಪ ದೇಸಾಯಿ,ವೆಂಕೋಬರಾವ್ ಶಿರವಾಳಕರ, ಸೋಮಶೇಖರಯ್ಯ ಸ್ವಾಮಿ ಹಿರೇಮಠ,ಗುರುಬಸಯ್ಯ ಗದ್ದುಗೆ,ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಈ ಸಮಾರಂಭದ ವೇದಿಕೆ ಮೇಲೆ ಡಾ. ಶರಣು.ಬಿ ಗದ್ದುಗೆ, ಬಸವರಾಜ ಹಿರೇಮಠ,ಹಾಗೂ ಇತರರು ಉಪಸ್ಥಿತರಿದ್ದರು. ಕುಮಾರಿ ದೀಪಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಸುರೇಶ ಅರುಣಿ ಸ್ವಾಗತಿಸಿದರು, ಬಸವರಾಜ ಸಿನ್ನೂರ ನಿರೂಪಿಸಿದರು,ನಾಗರಾಜ ಜಮದರಖಾನಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here