ಸುರಪುರ: ತಾಲೂಕಿನ ಸತ್ಯಂಪೇಟೆಯಲ್ಲಿನ ರಸ್ತೆಗಳು ಸದಾಕಾಲ ಕೊಚ್ಚೆ ಗುಂಡಿಗಳಿಂದಲೆ ತುಂಬಿರಲಿವೆ.ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಊರೊಳಗಿನ ಎಲ್ಲಾ ರಸ್ತೆಗಳು ಹಾಳಾಗಿವೆ.ಇದನ್ನು ಕುರಿತು ಲೋಕ ಜನಶಕ್ತಿ ಪಕ್ಷದಿಂದ ಅನೇಕ ಬಾರಿ ಮನವಿ ಮಾಡಿದ್ದರಿಂದಾಗಿ ಈಗ ಚರಂಡಿ ಹಾಗು ರಸ್ತೆ ದುರಸ್ಥಿ ಕೆಲಸ ಮಾಡಲಾಗುತ್ತಿದೆ.ಆದರೆ ನಿರ್ಮಿಸುತ್ತಿರುವ ಕಾಮಗಾರಿಗೆ ಸರಿಯಾದ ರೀತಿಯಲ್ಲಿ ಸಿಮೆಂಟ್ ಕಂಕರ್ ಬಳಸದೆ ಇರುವುದರಿಂದಾಗಿ ಕಳಪೆ ಗುಣಮಟ್ಟದ ಕಾಮಗಾರಿ ನಿರ್ಮಾಣವಾಗಿದೆ.
ಸದ್ಯ ನಿರ್ಮಿಸಿರುವ ಸಿಮೆಂಟ್ ಕಾಮಗಾರಿ ಸ್ವಲ್ಪ ತಳ್ಳಿದರೆ ಬಿದ್ದೋಗಲಿದೆ,ಇಂತಹ ಕಾಮಗಾರಿ ನಿರ್ಮಿಸುವ ಮೂಲಕ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಆರೋಪಿಸಿದ್ದಾರೆ.
ಈ ಕುರಿತು ಆರೋಪ ಮಾಡಿರುವ ಅವರು ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಬಂದು ವೀಕ್ಷಿಸಿ ಹಾಗು ಕಳಪೆ ಕಾಮಗಾರಿಯಿಂದಾಗಿ ಕೆಲವೆ ದಿನಗಳಲ್ಲಿ ಕಿತ್ತು ಹೋಗಲಿದ್ದು ಮತ್ತೆ ಯತಾಸ್ಥಿತಿಗೆ ರಸ್ತೆಗಳು ಬರಲಿವೆ.ಆದ್ದರಿಂದ ಅಧಿಕಾರಿಗಳು ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡಿ ಜನರಿಗೆ ಅನುಕೂಲ ಕಲ್ಪಿಸುವಂತೆ ಅವರು ಆಗ್ರಹಿಸಿದ್ದಾರೆ.